ಕಟೀಲು ಸದ್ಭಾವನಾ ದಿನಾಚರಣೆ

ಕಿನ್ನಿಗೋಳಿ: ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಯಾವುದೇ ಆಮಿಶಗಳಿಗೆ ಬಲಿಯಾಗದೇ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಧನಾತ್ಮಕವಾಗಿ ಚಿಂತಿಸಿ ಗುರಿಯನ್ನು ಸಾಧಿಸಬೇಕು ಎಂದು ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಪ್ರಿನ್ಸಿಪಾಲ್ ಮೇಜರ್ ಡಾ.ಗಂಗಾಧರ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನ ಮಾನವಿಕ ಸಂಘ ಹಾಗೂ ಎನ್.ಎಸ್.ಎಸ್. ನ ಜಂಟಿ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಹಾಗೂ ಸದ್ಭಾವನ ದಿನಾಚರಣೆ ಸಂದರ್ಭ ಮಾತನಾಡಿದರು.
ಕಟೀಲು ದೇವಳಾ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ಕೃಷ್ಣ ಹಾಗೂ ಮಾನವಿಕ ಸಂಘದ ಸಂಯೋಜನಾಧಿಕಾರಿ ವನಿತಾ ಉಪಸ್ಥಿತರಿದ್ದರು.
ಸೌಮ್ಯ ಸ್ವಾಗತಿಸಿ ಶಿಲ್ಪಾ ಶೆಟ್ಟಿ ವಂದಿಸಿದರು. ಪ್ರಶ್ನಿತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14091507

Comments

comments

Comments are closed.

Read previous post:
Kinnigoli-14091506
ಚೆಕ್ ವಿತರಣೆ

ಕಿನ್ನಿಗೋಳಿ: ಬಳ್ಕುಂಜೆ ಶ್ರೀಧರ ಆಚಾರ್ಯ ಅವರಿಗೆ ಪ್ರಕೃತಿ ವಿಕೋಪದಡಿಯಲ್ಲಿ ಮಂಜೂರಾಗಿದ್ದ ರೂ 65,000ರೂ ಚೆಕ್‌ನ್ನು ಸಚಿವ ಕೆ. ಅಭಯಚಂದ್ರ ಜೈನ್ ವಿತರಿಸಿದರು. ಈ ಸಂದರ್ಭ ಮಯ್ಯದ್ದಿ, ಸುರೇಶ್...

Close