ಕೊಯಿಕುಡೆ : ಪೋಡಿಮುಕ್ತ ಗ್ರಾಮ ಅಭಿಯಾನ

ಕಿನ್ನಿಗೋಳಿ: ಸರಕಾರದ ಸೇವೆಗಳು ಜನಸಾಮಾನ್ಯರಿಗೆ ಮುಟ್ಟಲು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆನರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಕೊಳ್ಳಬೇಕು ಎಂದು ಸಚಿವ ಕೆ. ಅಭಯಚಂದ್ರಜೈನ್ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯಿಕುಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಡಿಮುಕ್ತ ಗ್ರಾಮ ಅಭಿಯಾನದ ಗ್ರಾಮ ಸಭೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಈ ವಿಶೇಷ ಗ್ರಾಮಸಭೆಯಲ್ಲಿ ಮಂಗಳೂರು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕ ಪಿ ಶ್ರೀನಿವಾಸ್ ಮಾತನಾಡಿ ಖಾಸಗಿ ಹಿಡುವಳಿದಾರರ ಜಮೀನು ಗುರುತುಗಳನ್ನು ಸರಿಪಡಿಸಿ ಕೊಡಲಾಗುತ್ತದೆ. ಭೂ ಸುದಾರಣೆ ತೀರ್ಪಿನ ಪ್ರಕರಣಗಳ, ಲೋಪದೋಷ ಪಹಣಿ ಪತ್ರಿಕೆಗಳು, ಒಂದೇ ಪಹಣಿ ಪತ್ರಿಕೆಯಲ್ಲಿ ಹಲವಾರು ಹೆಸರುಗಳು, ಇತ್ಯರ್ಥವಾಗದ ದಾಖಲೆಗಳು, ನಶಿಸಿ ಹೋದ ದಾಖಲೆಗಳ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಜಮೀನಿನ ಯಜಮಾನನಲ್ಲಿರುವ ದಾಖಲೆಗಳನ್ನು ಒಟ್ಟು ಕ್ರೋಡಿಕರಿಸಿ ಕಾನೂನುರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು ಸರಿಪಡಿಸಿ ನೀಡಲಾಗುತ್ತದೆ. ಇದಕ್ಕಾಗಿ 12 ರಿಂದ 15 ಭೂಮಾಪಕರನ್ನು ನಿಯೋಜಿಸಿ ಯಾವುದೇ ಕುಂದು ಕೊರತೆಗಳನ್ನು ಸರಿಪಡಿಸಲಾಗುತ್ತದೆ. ಸರ್ವೇ ಕಾರ್ಯದ ಪ್ರತಿ ಹಂತದಲ್ಲಿ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.
ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಡಿ. ಆರ್. ಅಶೋಕ್, ಮಂಗಳೂರು ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ, ಮುಲ್ಕಿ ವಿಶೇಷ ತಹಶೀಲ್ದಾರ್ ಆನಂದ ಗಣಪತಿ ಖೇಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆರಾದ ಸಾವಿತ್ರಿ ಶೆಟ್ಟಿ, ಬೇಭಿ ಸುಂದರ ಕೋಟ್ಯಾನ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-14091502

Comments

comments

Comments are closed.

Read previous post:
Kinnigoli-14091501
ಕೆಮ್ರಾಲ್ ಶ್ರಮದಾನ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ, ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಿಂದೂ ಜಾಗರಣ ವೇದಿಕೆ ಕೆಮ್ರಾಲ್ ಮಂಡಲ ಹಾಗೂ ಪರಿಸರದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಕ್ಷಿಕೆರೆ- ಪಂಜ...

Close