ಟಾಪರ್‌ಗಳನ್ನು ಸೃಷ್ಟಿಸದೆ ಸಾಧಕರನ್ನು ಸೃಷ್ಟಿಸಬೇಕು

ಕಿನ್ನಿಗೋಳಿ: ಮಾನವನ ಒಳದೃಷ್ಟಿ ಹಾಗೂ ಹೊರದೃಷ್ಟಿಯ ಚಿಂತನೆಗಳನ್ನು ಪರಿಪೂರ್ಣವಾಗಿ ಮೂಡಿಸುವ ಗುರುವೇ ಶ್ರೇಷ್ಟ. ಶಿಕ್ಷಕರು ಕೇವಲ ಟಾಪರ್‌ಗಳನ್ನು ಸೃಷ್ಟಿಸದೆ ಸಾಧಕರನ್ನು ಸೃಷ್ಟಿಸಲು ಪಣತೊಡಬೇಕು. ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಗುರುವಂದನಾ ಸಮಾರಂಭ, ಪ್ರತಿಭಾ ಪ್ರದರ್ಶನ ಹಾಗೂ ತುಳು ನಗೆ ನಾಟಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀವರ್ಚನ ನೀಡಿದರು.
ಈ ಸಂಧರ್ಭ ಮುಲ್ಕಿ ಮೂಡಬಿದಿರೆ ಪರಿರದ ವಿವಿಧ ಶಾಲೆಗಳ ನಿವೃತ್ತಗೊಂಡ ಹಾಗೂ ನಿವೃತ್ತಿಗೊಳ್ಳಲಿರುವ ಶಿಕ್ಷಕರಾದ ಕಟೀಲು ಹಿ.ಪ್ರಾ.ಶಾಲೆಯ ವನಮಾಲ, ಸಸಿಹಿತ್ಲು ಹಿ.ಪ್ರಾ.ಶಾಲೆಯ ಲಕ್ಷ್ಮೀ ಕೆ., ಕೊಲೆಕಾಡಿ ಹಿ.ಪಾ.ಶಾಲೆಯ ಅಚ್ಯುತ ಜಿ., ಬಡಗ ಎಕ್ಕಾರು ಸರಕಾರಿ ಹಿ.ಪ್ರಾ.ಶಾಲೆಯ ಜೆಸಿಂತಾ ಡಿಸೋಜ, ಕಿನ್ನಿಗೋಳಿ ಸೈಂಟ್‌ಮೇರೀಸ್ ಶಾಲೆಯ ವಿನ್ನಿಡಿಸೋಜ, ಪುಚ್ಚಮೊಗರು ಸರಕಾರಿ ಹಿ.ಪ್ರಾ. ಶಾಲೆಯ ಸಿ. ಯಶೋಧ, ನಡುಗೋಡು ಹಿ.ಪ್ರಾ. ಶಾಲೆಯ ಸೌಭದ್ರೆ, ಕಡಂದಲೆ ಸುಬ್ರಹ್ಮಣ್ಯಸ್ವಾಮಿ ಪ್ರೌಢ ಶಾಲೆಯ ದಿವಾಕರ ಬಂಗೇರ, ಕಡಂದಲೆ ಎಸ್.ಎಸ್. ಹೈಸ್ಕೂಲು ಶಾಲೆಯ ಕೆ. ಶಂಕರನಾರಾಯಣ ರಾವ್ ಪಿ., ಗುಡ್ಡೆಯಂಗಡಿ ಹಿ.ಪ್ರಾ. ಶಾಲೆಯ ದತ್ತಾತ್ರೇಯ ರಾವ್, ಬೋರುಗುಡ್ಡೆ ಸರಕಾರಿ ಹಿ.ಪ್ರಾ. ಶಾಲೆಯ ಸುಲೋಚನಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಬಿ. ನಾಗರಾಜ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಟೀಲು ದೇವಳ ಕಾಲೇಜು ಉಪನ್ಯಾಸಕ ಸೋಂದ ಭಾಸ್ಕರ ಭಟ್, ನಿಡ್ಡೋಡಿ ಜ್ಞಾನರತ್ನ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಭಾಸ್ಕರ ದೇವಸ್ಯ ಉಪಸ್ಥಿತರಿದ್ದರು.
ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಸ್ಥೆಯ ಟ್ರಸ್ಟಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-14091509

Comments

comments

Comments are closed.

Read previous post:
Kinnigoli-14091508
ಉಲ್ಲಂಜೆ ಸಸಿ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕೊಡೆತ್ತೂರು ಆದರ್ಶ ಬಳಗ ಹಾಗೂ ಸಜ್ಜನ ಬಂಧುಗಳ ವತಿಯಿಂದ ಸಸಿಗಳನ್ನು ವಿತರಿಸಲಾಯಿತು. ಈ...

Close