ಜನ್‌ಧನ್, ಜೀವನ್ ವಿಮಾ ಯೋಜನೆ

ಕಿನ್ನಿಗೋಳಿ: ಕೇಂದ್ರ ಸರಕಾರದದಿಂದ ದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಸಹಾಯ ನೀಡುವ ಸದುದ್ದೇಶದಿಂದ ಅಟಲ್ ಪಿಂಚಣಿ, ಜನ್‌ಧನ್, ಜೀವನ್ ವಿಮಾ ಯೋಜನೆಯಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಯುವ ಜನರು ಕಾರ್ಯಕರ್ತರು ಗ್ರಾಮೀಣ ಮಟ್ಟದ ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಭಾನುವಾರ ನಡೆದ ಪ್ರಧಾನ ಮಂತ್ರಿ ಜೀವನ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷೆ ವಿಮಾ ಯೋಜನೆಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು., ಬಿಜೆ.ಪಿ. ದ.ಕ. ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಸಮಿತಿಯ ಭುವನಾಭಿರಾಮ ಉಡುಪ, ಮುಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷ ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಸುದರ್ಶನ ಮೂಡಬಿದಿರೆ, ಮಂಗಳೂರು ಸಿಂಡಿಕೇಟ್ ಬ್ಯಾಂಕ್ ಹಿರಿಯ ಪ್ರಬಂಧಕ ಗಣೇಶ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು.
ಜಿ.ಪಂ. ಈಶ್ವರ್ ಕಟೀಲು ಸ್ವಾಗತಿಸಿದರು. ಕಟೀಲು ಹಾಗೂ ಕಿನ್ನಿಗೋಳಿ ಜಿ. ಪಂ. ವ್ಯಾಪ್ತಿಯ 300 ಕ್ಕೂ ಮಿಕ್ಕಿ ಗ್ರಾಮಸ್ಥರು ವಿಮಾ ಯೋಜನೆ ಮಾಡಿಕೊಂಡರು.

Kinnigoli-15091501

Comments

comments

Comments are closed.

Read previous post:
Kinnigoli-14091510
ಸನ್ನಡತೆಯ ಸುಗ್ರೀವ : ಶ್ರೀಧರ ಡಿ.ಎಸ್

ಕಿನ್ನಿಗೋಳಿ: ಶ್ರೀ ರಾಮನ ಸ್ನೇಹಿತನಾಗಿ, ಭಕ್ತನಾಗಿ ಆದರ್ಶ ಗುಣಗಳಿಂದ ತನ್ನ ಶ್ರೇಷ್ಠತೆ ಮೆರೆದ ಸುಗ್ರೀವ ಉತ್ತಮ ಗುಣ ಸಂಪನ್ನಗಳನ್ನು ಹೊಂದಿಕೊಂಡು ತನ್ನ ಹೆಚ್ಚುಗಾರಿಕೆ ಮೆರೆದಿದ್ದಾನೆ ಎಂದು ಹಿರಿಯ ಯಕ್ಷಗಾನ...

Close