ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉದ್ಘಾಟನೆ

ಕಟೀಲು: ಆಶಕ್ತ ಕಲಾವಿದರ ನೆರವಿಗೆ ಯಕ್ಷಗಾನ ಕಲಾವಿದನಿಂದಲೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ರೂಪು ಗೊಂಡಿರುವುದು ಶ್ಲಾಘನೀಯ , ಇದು ಪಟ್ಲ ಹಾಗೂ ಅವರ ಅಭಿಮಾನಿಗಳ ಸಾಧನೆ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಕಟೀಲು ದೇವಳದ ಸರಸ್ವತೀ ಸದನದ ಸಭಾಭವನದಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭ ಟ್ರಸ್ಟ್ ವತಿಯಿಂದ ತೆಂಕು ಹಾಗೂ ಬಡಗಿನ 11 ಜನ ಆಶಕ್ತ ಕಲಾವಿದರಾದ ಜಗನ್ನಾಥ ಆಚಾರಿ, ಉದಯ ಕುಮಾರ್ ಕಾಯರ್‌ಕೋಡಿ, ತುಂಬ್ರಿ ಭಾಸ್ಕರ, ಉದಯ ನಾವಡ ಮದೂರು, ಪರಮೇಶ್ವರ ಹೆಗಡೆ, ಗಣೇಶ ಕೊಲಕಾಡಿ, ಕೊರಗಪ್ಪ ನಾಯ್ಕ, ಕಾಟುಕುಕ್ಟೆ , ಜನಾರ್ದನ ಜೋಗಿ, ಮುಂಡ್ಕೂರ ಜಯರಾಮ ಶೆಟ್ಟಿ , ರಾಮಕುಲಾಲ ದಾಸನ್ಕ, ದಿ| ರಮೇಶ್ ಗೌಡ ಬೆಳಾಲು ರವರಿಗೆ ಟ್ರಸ್ಟ್ ವತಿಯಿಂದ ತಲಾ 50 ಸಾವಿರ ರೂ ಗೌರವಧನ ನೀಡಲಾಯಿತು.
ಅಶಕ್ತ ಕಲಾವಿದರ ಬದುಕಿಗೆ ಚೈತನ್ಯ ತುಂಬುವ, ಬಡ ಕಲಾವಿದರ ಬಾಳಿಗೆ ಬೆಳಕು ನೀಡುವ ಉದ್ದೇಶದಿಂದ ಈ ಟ್ರಸ್ಟ್ ಬೆಂಬಲನೀಡಲಿದ್ದು ಈಗಾಗಲೇ ಇಂದು ಕೋಟಿ ರೂ ವೆಚ್ಚದ ಭರವಸೆ ಬಂದಿದ್ದು ಮುಂದಿನ ವರ್ಷದೊಳಗೆ 10 ಕೋಟಿ ನಿಧಿ ಕ್ರೋಢಿಕರಿಸುವ ಯೋಜನೆಯಾಗಿದೆ ಎಂದು ಟ್ರಸ್ಟ್‌ನ ಸ್ಥಾಪಕ ಸತೀಶ್ ಕುಮಾರ್ ಶೆಟ್ಟಿ ಪಟ್ಲ ಹೇಳಿದರು. ಸಚಿವ ರಮಾನಾಥ ರೈ ಟ್ರಸ್ಟ್‌ನ ವೆಬ್ ಸೈಟ್ ಉದ್ಘಾಟಿಸಿದರು. ಸಚಿವ ಅಭಯಚಂದ್ರ ಜೈನ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಟ್ರಸ್ಟ್‌ನ ಲಾಂಛನ ಉದ್ಘಾಟಿಸಿದರು. ಕಟೀಲಿನ ಅರ್ಚಕ ರಾದ ವಾಸುದೇವ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್, ಅಧ್ಯಕ್ಷ ಎ. ಸದಾನಂದ ಶೆಟ್ಟಿ , ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ , ಮಸ್ಕತ್ ಉದ್ಯಮಿ ಎಸ್. ಕೆ. ಪೂಜಾರಿ , ಉಳೆಪಾಡಿ ಗುತ್ತು ರಾಜೇಶ್ ನಾಕ್ ಉದ್ಯಮಿ ಮರವೂರು ಜಗದೀಶ ಶೆಟ್ಟಿ , ರಾಘವೇಂದ್ರ ಆಚಾರ್ ಬಜೆಪೆ, ಜಿ. ಪಂ. ಸದಸ್ಯ ಈಶ್ವರ ಕಟೀಲು, ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರ‍್ತಿ, ಪಟ್ಲಗುತ್ತು ಮಹಾಬಲ ಶೆಟ್ಟಿ , ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ , ಟ್ರಿಸ್ಟ್‌ನ ಸುಧೀರ ಭಟ್ ಎಕ್ಕಾರು, ಐಕಳ ಗಣೇಶ್ ಶೆಟ್ಟಿ , ಅಶೋಕ್ ಶೆಟ್ಟಿ , ಉದಯಾನಂದ ಶೆಟ್ಟಿ , ರಾಜೀವ ಕೆ, ಜಗನ್ನಾಥ ಶೆಟ್ಟಿ ಬಾಳ, ಸುದೇಶ್ ಕುಮಾರ್ ರೈ, ಡಾ| ಸತೀಶ್ ಭಂಡಾರಿ, ಡಾ| ಪದ್ಮನಾಭ ಕಾಮತ್ , ಡಾ| ಎನ್. ನಾರಾಯಣ ಶೆಟ್ಟಿ , ಬಲಿಪ ನಾರಾಯಣ ಭಾಗವತ ಮತ್ತಿತರರು ಉಪಸ್ಥಿತರಿದ್ದರು.
ವಾಸುದೇವ ರಂಗಾ ಭಟ್ ಹಾಗು ಸುಣ್ಣಂಬಳ ವಿಶ್ವೇಶ್ವರ ಭಟ್ ಕಲಾವಿದರ ವಿವರ ನೀಡಿದರು. ಕದ್ರಿ ನವನೀತ ಶೆಟ್ಟಿ ಹಾಗೂ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಅಮ್ಮೆಂಜೆ ವಂದಿಸಿದರು.

Kinnigoli-15091505 Kinnigoli-15091506 Kinnigoli-15091507

 

Comments

comments

Comments are closed.

Read previous post:
Kinnigoli-15091504
ಪ್ರಾಥಿಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಸರಕಾರಿ ಶಾಲೆ ಕೆಂಚನಕೆರೆ- ಕಿಲ್ಪಾಡಿ ಜನರಲ್ ಶಾಲೆ ಕಿಲ್ಪಾಡಿ ಆಶ್ರಯದಲ್ಲಿ ಮುಲ್ಕಿ ಕ್ಲಸ್ಟರ್ ಮಟ್ಟದ ಪ್ರಾಥಿಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸೋಮವಾರ ಜಿ. ಪಂ....

Close