ಕಟೀಲು ಶತಮಾನೋತ್ಸವ ಭವನಕ್ಕೆ ಶಿಲನ್ಯಾಸ

ಕಿನ್ನಿಗೋಳಿ: ಕನ್ನಡ ಮಾಧ್ಯಮದ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕಟೀಲು ದೇವಳದ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿ ಕಂಡುಬರುತ್ತಿದೆ. ಅಲ್ಲದೆ ಗ್ರಾಮೀಣ ಮಟ್ಟದಲ್ಲಿ ಪಠ್ಯ ಹಾಗೂ ಪಠ್ಯೇತರ ಶಿಕ್ಷಣಗಳನ್ನು ನೀಡಿ ಅನೇಕ ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ನನ್ನ ಸಂಸದರ ನಿಧಿಯಿಂದ ೧೫ ಲಕ್ಷರೂ.ಗಳನ್ನು ಶತಮಾನೋತ್ಸವ ಸಭಾಭವನಕ್ಕೆ ನೀಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಶತಮಾನೋತ್ಸವ ಭವನಕ್ಕೆ ಶಿಲಾನ್ಯಾಸ ನಡೆಸಿ ಮಾತನಾಡಿದರು.
ಯುವಜನಾ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕ ಕ್ಷೇತ್ರವಾಗಿರುವ ಕಟೀಲಿನ ಅಭಿವೃದ್ಧಿ, ಒಳಚರಂಡಿ ಯೋಜನೆ ಹಾಗೂ ಬೈಪಾಸ್ ರಸ್ತೆಯ ಪ್ರಸ್ತಾವನೆ ಪ್ರಗತಿಯಲ್ಲಿದ್ದು ಈ ಬಗ್ಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಟೀಲು ದೇವಳದ ಅರ್ಚಕರಾದ ವಾಸುದೇವ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು.
ಕರ್ನಾಟಕ ಸರಕಾರದ ಅರಣ್ಯ ಸಚಿವ ಬಿ. ರಮಾನಾಥ ರೈ, ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ, ಶತಮಾನೋತ್ಸವ ಸಮಿತಿಯ ಗೌರವ ಸಲಹೆಗಾರ ಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿಗಳಾದ ಕೃಷ್ಣ ಡಿ.ಶೆಟ್ಟಿ ಎಕ್ಕಾರು, ಕಟೀಲು ಪದ್ಮನಾಭ ಭಟ್, ಕೊಡೆತ್ತೂರು ಸಾಂತ್ಯ ಭಾಸ್ಕರ ಶೆಟ್ಟಿ, ಕಟೀಲು ಚಂದ್ರಶೇಖರ ಬಿ, ಹರೀಶ್ ಪೂಂಜಾ, ಎಂ. ಶೇಖರ ಪೂಜಾರಿ, ವೇಣುಗೋಪಾಲ ಶೆಟ್ಟಿ ಮುಂಬಯಿ, ಶ್ರೀಧರ ಪೂಜಾರಿ, ಯಾದವ ಕೋಟ್ಯಾನ್, ದೊಡ್ಡಯ್ಯ ಮೂಲ್ಯ, ಬಜಪೆ ಪಾಪ್ಯುಲರ್ ಸಂಸ್ಥೆಯ ಜಗದೀಶ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕೊಂಡೆಮೂಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸುವರ್ಣ, ಉಪಾಧ್ಯಕ್ಷ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಈಶ್ವರ ಕಟೀಲು ವಂದಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15091503

Comments

comments

Comments are closed.

Read previous post:
Kinnigoli-15091502
ಹೊಸಕಾಡು ಪರಿಸರದಲ್ಲಿ ಶ್ರಮದಾನ

ಕಿನ್ನಿಗೋಳಿ : ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಹಿಂದು ಜಾಗರಣ ವೇದಿಕೆ ಹೊಸಕಾಡು ಘಟಕದ ವತಿಯಿಂದ ಪಕ್ಷಿಕೆರೆ ಹೊಸಕಾಡು ಪರಿಸರದಲ್ಲಿ ಶ್ರಮದಾನದ ಮೂಲಕ ರಸ್ತೆ ಬದಿ...

Close