ಹೆಣ್ಣು ಮಕ್ಕಳ ವಿಶ್ವಾಸ ಕುಗ್ಗಿ ದುರ್ಬಲರಾಗುವಂತೆ ಮಾಡಿವೆ

ಮೂಲ್ಕಿ: ನಾವು ನಮ್ಮಲ್ಲಿ ರೂಪಿಸಿಕೊಂಡಿರುವ ಲಿಂಗತ್ವ ಕಟ್ಟುಪಾಡುಗಳು ಮಕ್ಕಳೊಳಗೆ ಭೇಧ ಮೂಡಿಸುವ ಕಾರಣ ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಕುಗ್ಗಿ ಅವರು ಸಮಾಜದಲ್ಲಿ ದುರ್ಬಲರಾಗುವಂತೆ ಮಾಡಿವೆ ಎಂದು ಸುರತ್ಕಲ್ ಬಾಳ ಗ್ರಾಮ ಪಂ.ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುದ್ತಡ್ಕ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಸಂಯೋಜನೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶುಕ್ರವಾರ ನಡೆದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡಿದರು.
ಅಶಕ್ತರನ್ನು ಬಲಿಷ್ಟಗೊಳಿಸಿ ಮುಖ್ಯವಾಹಿನಿಗೆ ತರಲು ಸವಿಂದಾನ ರೂಪಿಸಿದ ಮೀಸಲಾತಿಯಿಂದ ಸ್ತ್ರಿಯರು ಸಬಲೀಕರಣಗೊಳ್ಳುವ ಹಾದಿಯಲ್ಲಿದ್ದರೂ ಮಾನಸಿಕವಾಗಿ ತಾವು ಅಬಲೆಯರು ಎಂಬ ಸ್ಥಿತಿ ಅವರ ಹಿನ್ನಡೆಗೆ ಕಾರಣವಾಗಿದೆ.ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಮಕ್ಕಳನ್ನು ಬೆಳೆಸುವ ಹಂತದಲ್ಲಿಯೇ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯ ನಡೆಯಬೇಕು ಈ ಕಾರ್ಯಗಳು ಮನೆಯಿಂದ ಪ್ರಾರಂಭಗೊಂಡು ಬಳಿಕ ಸಮಾಜದಿಂದ ಮುನ್ನಡೆಯಬೇಕು ಎಂದರು.
ಈ ಸಂದರ್ಭ ಶಿಕ್ಷಣ ತಜ್ಞ ಅಡ್ವೆ ರವೀಂದ್ರ ಪೂಜಾರಿ,ನಿವೃತ್ತ ಶಿಕ್ಷಕಿ ವಸಂತಿ ರಾಮ ಪೂಜಾರಿ,ನಿವೃತ್ತ ಮುಖ್ಯೋಪಾದ್ಯಾಯ ಅಚ್ಚುತ ಜಿ.ಆಚಾರ್ಯ, ನಿವೃತ್ತ ಶಿಕ್ಷಕಿ ಲಲಿತಾ ಶ್ಯಾಮ ಶೆಟ್ಟಿ ಯವರನ್ನು ಶಿಕ್ಷಣರಂಗದ ಮಹೋನ್ನತ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ವಹಿಸಿದ್ದರು.ಶ್ರೀ ನಾರಾಯಣ ಗುರು ಮಹಿಳಾ ಮಂಡಲದ ಅಧ್ಯಕ್ಷೆ ಸರಸ್ವತೀ ರಾಘು ಸುವರ್ಣ, ಕಾರ್ಯದರ್ಶಿ ಶಶಿಕಲಾ ಯದೀಶ್ ಕೊಕ್ಕರಕಲ್, ಕೋಶಾಧಿಕಾರಿ ದಿವ್ಯಾ ರಮಾನಾಥ ಸುವರ್ಣ,ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಚಾಲಕ ಹರಿಶ್ಚಂದ್ರ ಪಿ.ಸಾಲ್ಯಾನ್,ಸಂಘದ ಗೌ.ಪ್ರಧಾನ ಕಾರ್ಯದರ್ಶಿ ರಮೇಶ್ ಕೊಕ್ಕರಕಲ್ ಉಪಸ್ಥಿತರಿದ್ದರು.

ಸರಸ್ವತಿ ರಾಘು ಸುವರ್ಣ ಸ್ವಾಗತಿಸಿದರು.ಪತ್ರಕರ್ತ ನರೇಂದ್ರ ಕೆರೆಕಾಡು ನಿರೂಪಿಸಿದರು. ಶಶಿಕಲಾ ಯದೀಶ್ ವಂದಿಸಿದರು.

Mulkii-16091503

Comments

comments

Comments are closed.

Read previous post:
Kinnigoli-16091502
ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

ಮೂಲ್ಕಿ: ವಿಮಾ ಸಪ್ತಾಹದ ಅಂಗವಾಗಿ ಜೀವ ವಿಮಾ ನಿಗಮದ ಮೂಲ್ಕಿ ಶಾಖೆ ವತಿಯಿಂದ ಗುರುಪುರ ಕೈಕಂಬದ ಜೀವದಾನ ಸಂಸ್ಥೆಯ ಅನಾರೋಗ್ಯ ಪೀಡಿತ 75 ಅನಾಥ ಮಕ್ಕಳಿಗೆ ಹಣ್ಣು...

Close