ವಾರ್ಷಿಕ ಸಂಚಿಕೆ ವಿಜಯಾ ಬಿಡುಗಡೆ

ಮೂಲ್ಕಿ: ಅಧ್ಯಯನ ಕೇವಲ ಪಠ್ಯ ಕೇಂದ್ರೀಕೃತವಾಗದೆ ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಮುಂದುವರೆಯುವಂತಿದ್ದರೆ ಮಾತ್ರ ವಿದ್ಯಾರ್ಥಿಯ ಅಭ್ಯುದಯ ಸಾಧ್ಯ ಎಂದು ಅಕಾಡಮಿ ಆಪ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ವಾರ್ಷಿಕ ಸಂಚಿಕೆ ವಿಜಯಾ ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಯ ಗುರಿಯೊಂದಿಗೆ ಪಠ್ಯ ಕೇಂದ್ರೀಕೃತ ಅಧ್ಯಯನ ನಡೆಸುತ್ತಿರುವುದು ಸಾಮಾನ್ಯವಾಗಿದ್ದು ಭವಿಷ್ಯ ಜೀವನದಲ್ಲಿ ಮುಂದುವರಿಯಲು ಸಮಸ್ಯೆಯಾಗುತ್ತದೆ. ಪ್ರಾಪಂಚಿಕ ಹಾಗೂ ವ್ಯವಹಾರಿಕ ಜ್ಞಾನ,ಸಾಹಿತ್ಯ ,ಸಂಸ್ಕಾರ,ವಿಷಯಗಳ ಅರಿವು ಗಳಿಸಿಕೊಂಡು ಉನ್ನತಿ ಗಳಿಸಲು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ವಹಿಸಿದ್ದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ವಾರ್ಷಿಕ ಸಂಚಿಕೆಯ ಸಂಪಾದಕ ಪ್ರೊ. ಜಯರಾಮ ಬಪ್ಪನಾಡು.ಕಾಲೇಜು ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಶೋಧನ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರೊ.ಜಯರಾಮ ಬಪ್ಪನಾಡು ಸ್ವಾಗತಿಸಿ, ವಾರ್ಷಿಕ ಸಂಚಿಕೆಗೆ ಸಹಕರಿಸಿದ ಸಹೃದಯರನ್ನು ಅಭಿನಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಪ್ರೊ.ಶೈಲಜಾ ಏತಡ್ಕ ನಿರೂಪಿಸಿದರು.

Bhagyavan Sanil

Mulkii-16091504

Comments

comments

Comments are closed.

Read previous post:
Mulkii-16091503
ಹೆಣ್ಣು ಮಕ್ಕಳ ವಿಶ್ವಾಸ ಕುಗ್ಗಿ ದುರ್ಬಲರಾಗುವಂತೆ ಮಾಡಿವೆ

ಮೂಲ್ಕಿ: ನಾವು ನಮ್ಮಲ್ಲಿ ರೂಪಿಸಿಕೊಂಡಿರುವ ಲಿಂಗತ್ವ ಕಟ್ಟುಪಾಡುಗಳು ಮಕ್ಕಳೊಳಗೆ ಭೇಧ ಮೂಡಿಸುವ ಕಾರಣ ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಕುಗ್ಗಿ ಅವರು ಸಮಾಜದಲ್ಲಿ ದುರ್ಬಲರಾಗುವಂತೆ ಮಾಡಿವೆ ಎಂದು...

Close