ಸ್ವಾವಲಂಭಿ ಬದುಕಿನ ಜೊತೆಗೆ ಉತ್ತಮ ಆರೋಗ್ಯ

ಮೂಲ್ಕಿ: ನಮ್ಮ ಪರಿಸರದ ಬಗ್ಗೆ ನಾವು ಕಾಳಜಿ ವಹಿಸಿದರೆ ಮಾತ್ರ ಆರೋಗ್ಯವಂತರಾಗಿ ಬಾಳಬಹುದು. ನಿತ್ಯ ಪರಿಸರದ ಬಗ್ಗೆ ಗಮನ ಹರಿಸುವುದರೊಂದಿಗೆ ಫಲವಸ್ತುಗಳ ಗಿಡಗಳು ಔಷದೀಯಗಿಡಗಳನ್ನು ಆವರಣದಲ್ಲಿ ಬೆಳೆಸುವ ಮೂಲಕ ಆರೋಗ್ಯ ರಕ್ಷಣೆ ಸಾಧ್ಯ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸೀಸ್ ಝೇವಿಯರ್ ಗೋಮ್ಸ್ ಹೇಳಿದರು.
ಮೂಲ್ಕಿ ನಗರ ಪಂಚಾಯತಿ ಸಹಯೋಗದಲ್ಲಿ ಭಾರತೀಯ ಕಥೋಲಿಕ್ ಯುವ ಸಂಚಲನ ಮೂಲ್ಕಿ ಶಾಖೆಯ ಸಂಯೋಜನೆಯಲ್ಲಿ ಭಾನುವಾರ ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಆವರಣದಲ್ಲಿ ನಡೆದ ಮಲೇರಿಯಾ, ಡೆಂಗ್ಯೂ, ಜಿಕೂನ್ ಗುನ್ಯಾ ಬಗ್ಗೆ ಜನ ಜಾಗ್ರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾವಲಂಭಿ ಬದುಕಿನ ಜೊತೆಗೆ ಉತ್ತಮ ಆರೋಗ್ಯವಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ ಈ ಬಗ್ಗೆ ಶ್ರಮ ವಹಿಸುವ ಕಥೋಲಿಕ್ ಯುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಮೂಲ್ಕಿಯ ಹಿರಿಯ ವೈದ್ಯ ಡಾ.ಸುರೇಶ್ ಅರಾಹ್ನಾ ರವರು ಹಸಿರು ಬಲೂನು ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೂಲ್ಕಿ ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ,ಐಸಿವೈಎಂ ಮೂಲ್ಕಿ ಘಟಕದ ಅಧ್ಯಕ್ಷೆ ವಿನೋಲಾ ರೆಬೆಲ್ಲೊ,ವಾರ್ಡು ಗುರಿಕಾರರು ಹಾಶಗೂ ಧರ್ಮ ಸಭೆಯ ಸದಸ್ಯರು ಉಪಸ್ಥಿತರಿದ್ದರು.

Bhagyavan Sanil

Mulki-17091501

Comments

comments

Comments are closed.

Read previous post:
Mulkii-16091504
ವಾರ್ಷಿಕ ಸಂಚಿಕೆ ವಿಜಯಾ ಬಿಡುಗಡೆ

ಮೂಲ್ಕಿ: ಅಧ್ಯಯನ ಕೇವಲ ಪಠ್ಯ ಕೇಂದ್ರೀಕೃತವಾಗದೆ ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಮುಂದುವರೆಯುವಂತಿದ್ದರೆ ಮಾತ್ರ ವಿದ್ಯಾರ್ಥಿಯ ಅಭ್ಯುದಯ ಸಾಧ್ಯ ಎಂದು ಅಕಾಡಮಿ ಆಪ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್...

Close