ಮೂಲ ನಂಬಿಕೆಯ ಧರ್ಮ ಹಿಂದು ಧರ್ಮ

ಕಿನ್ನಿಗೋಳಿ: ವಿಧೇಯತೆ, ಗೌರವ, ಶಿಸ್ತು, ಸಂಸ್ಕಾರ, ಸಂಸ್ಕ್ರತಿ ಹಾಗೂ ಮೂಲ ನಂಬಿಕೆಯನ್ನು ಹೊಂದಿಕೊಂಡಿರುವ ಧರ್ಮವೇ ಹಿಂದು ಧರ್ಮ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯ. ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಪಂಜ ಕೊಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ (ರಿ) ಹಾಗೂ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ ಆಶ್ರಯದಲ್ಲಿ ಗುರುವಾರ ಶ್ರೀ ಹರಿಪಾದ ಜಾರಂತಾಯ ದೈವಸ್ಥಾನದ ವಠಾರದಲ್ಲಿ ನಡೆದ ಗಣೇಶ ಚತುರ್ಥಿಯ ಪೂಜೆ ಮತ್ತು ಮೊಸರುಕುಡಿಕೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಅರ್ಚಕ ಗಣಪತಿ ಉಡುಪ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೂಲ್ಕಿ ಸೀಮೆ ಎಂ. ದುಗ್ಗಣ್ಣ ಸಾವಂತ ಅರಸರು ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಅರ್ಚಕ ಗಣಪತಿ ಉಡುಪ ಕೊಕುಡೆ ನಿವೃತ್ತ ಶಿಕ್ಷಕಿ ಸುಲೋಚನ ಟೀಚರ್, ಹರಿಪಾದೆ ಲಕ್ಷ್ಮೀನಾರಾಯಣ ರಾವ್, ಪದ್ಮಯ್ಯ ಶೆಟ್ಟಿ ಕೊಕುಡೆ, ಈ.ಟಿ. ಶೆಟ್ಟಿ ಪಂಜ, ಹರಿಪಾದೆ ಭಂಡಾರ ಮನೆ ನಾರಾಯಣ ಕೋಟ್ಯಾನ್, ನಾರಾಯಣ ಸುವರ್ಣ ಕಾಪಿಕಾಡು, ರಮೇಶ್ ದೇವಾಡಿಗ ಪಕ್ಷಿಕೆರೆ, ಕಲ್ಯಾಣಿ ಬೆಲ್ಚಡ್ತಿ, ಬಾಳೆಹಿತ್ಲು ಕಾಪಿಕಾಡು, ಹೊನ್ನಪ್ಪ ದೇವಾಡಿಗ, ದಿ. ವಾಮನ ದೇವಾಡಿಗ ಸ್ಮರಣಾರ್ಥ ಭಾಸ್ಕರ ದೇವಾಡಿಗ, ದಿ. ಐತಪ್ಪ ಪೂಜಾರಿ ಸ್ಮರಣಾರ್ಥ ಕೃಷ್ಣಾನಂದ ಕೋಟ್ಯಾನ್, ದಿ. ದಾಮೋದರ ದೇವಾಡಿಗ ಸ್ಮರಣಾರ್ಥ ಕೇಶವ ದೇವಾಡಿಗ ದಿ. ರಾಮಯ್ಯ ಬೆಲ್ಚಡ ಸ್ಮರಣಾರ್ಥ ಪದ್ಮನಾಭ ಬೆಲ್ಚಡ ಅವರನ್ನು ಸನ್ಮಾನಿಸಲಾಯಿತು.
ಸಂತ ಅಲೋಶಿಯಸ್ ಕಾಲೇಜು ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್, ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಶ್ರೀ ಹರಿಪಾದ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರ ಗುತ್ತಿನಾರ್ ಭೋಜ ಶೆಟ್ಟಿ, ವಿಶ್ವನಾಥ ಶೆಟ್ಟಿ ಪಂಜದಗುತ್ತು, ಶಂಭು ಮುಕ್ಕಲ್ದಿ ಅತ್ತೂರು ಭಂಡಾರ ಮನೆ, ಉದ್ಯಮಿ ಚರಣ್ ಶೆಟ್ಟಿ, ಗಣೇಶ್ ಶೆಟ್ಟಿ ಐಕಳ, ವಾಮನ ಪೂಜಾರಿ ಉದ್ಯಮಿ ಮುಂಬೈ, ಕೊಕುಡೆ ಜಿ. ಪಂ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ಭುಜಂಗ ಪೂಜಾರಿ, ಕೆಮ್ರಾಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎನ್. ಹೆಗ್ಡೆ, ಕೆಮ್ರಾಲ್ ಸರಕಾರಿ ಆಸ್ಪತ್ರೆ ವೈದ್ಯ ಡಾ. ಭಾಸ್ಕರ್ ಎಸ್ ಕೋಟ್ಯಾನ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ನಾಗೇಶ್ ಬೊಳ್ಳೂರು, ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ ಗೌರವಾಧ್ಯಕ್ಷ ವಾಸುದೇವ ಭಟ್ ಪಂಜ, ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ ಗೌರವಾಧ್ಯಕ್ಷೆ ವೀಣಾ ಭಟ್, ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ ಅಧ್ಯಕ್ಷೆ ಲೋಲಾಕ್ಷಿ ಕಾಪಿಕಾಡು ಮತ್ತಿತರರು ಉಪಸ್ಥಿತರಿದ್ದರು.
ವಿದ್ವಾನ್ ಪಂಜ ಭಾಸ್ಕರ ಭಟ್ ಪ್ರಸ್ತಾವನೆಗೈದರು. ಪ್ರಕಾಶ್ ಶೆಟ್ಟಿ ನಲ್ಯಗುತ್ತು ಸ್ವಾಗತಿಸಿದರು, ಸರಿತಾ ಆರ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಬಂಟರ ವಾಣಿ ಗೌರವ ಸಂಪಾದಕ ಅಶೋಕ್ ಪಕ್ಕಳ ಮತ್ತು ಅರ್ಪಿತಾಶೆಟ್ಟಿ ಸುರಗಿರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-18091504

Comments

comments

Comments are closed.

Read previous post:
Kinnigoli-18091503
ಬಳ್ಕುಂಜೆ ಮೊಸರುಕುಡಿಕೆ

ಕಿನ್ನಿಗೋಳಿ: ಬಳಕುಂಜೆ ವಿಠೋಭಾ ರಖುಮಾಯಿ ಭಜನಾ ಮಂದಿರದ ವಠಾರದಲ್ಲಿ ಗಣೇಶ ಚತುರ್ಥಿಯಂದು ಮೊಸರು ಕುಡಿಕೆ ನಡೆಯಿತು.

Close