ಮೂಲ್ಕಿ ಬಿಲ್ಲವ ಸಂಘದಲ್ಲಿ ಇಂಜಿನಿಯರ‍್ಸ್ ಡೇ

ಮೂಲ್ಕಿ: ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಗಳಿಸಿ ಅಭಿವೃದ್ಧಿ ಹೊಂದುವ ಜೊತೆಗೆ ಉಳಿದ ವಿದ್ಯಾರ್ಥಿಗಳಿಗೂ ಮಾರ್ಗದರ್ಶಕರಾಗ ಬೇಕು ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಉನ್ನತ ಶಿಕ್ಷಣ ನಿಧಿ ಪ್ರಾಯೋಜಕತ್ವದಲ್ಲಿ ನಡೆದ ಇಂಜಿನಿಯರ‍್ಸ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಲ್ಲವ ಸಮಾಜ ಸೇವಾ ಸಂಘದ ಉನ್ನತ ಶಿಕ್ಷಣ ನಿಧಿಯ ವತಿಯಿಂದ ಸಮಾಜದ ತಾಂತ್ರಿಕ,ವೈದ್ಯಕೀಯ ಹಾಗೂ ಇನ್ನತಿತರ ಉನ್ನತ ಶಿಕ್ಷಣಕ್ಕಾಗಿ ಸಹಾಯ ಧನ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಅವನ್ನು ಪಡೆದು ಅಭಿವೃದ್ಧಿ ಹೊಂದಿ ಸಮಾಜ ಹಾಗೂ ದೇಶದ ಉನ್ನತಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭ ಇಂಜಿನಿಯರ್ ಶಿಕ್ಷಣ ಪೂರೈಸಿ ವೃತ್ತಿ ಜೀವನ ನಡೆಸುತ್ತಿರುವ ಮನೋಜ್ ಕೆ.ಎಸ್.ರಾವ್ ನಗರ ಮತ್ತು ಶಿವ ಪ್ರಸಾದ್ ಮೂಲ್ಕಿ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರಕ ಉಪಯುಕ್ತ ಮಾಹಿತಿ ನೀಡಿದರು.
ಈ ಸಂದರ್ಭ ಉನ್ನತ ಶಿಕ್ಷಣ ನಡೆಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಸಂಘದ ಮಾಜಿ ಅಧ್ಯಕ್ಷ ರಾಘು ಸುವರ್ಣ, ಗೌ.ಪ್ರಧಾನ ಕಾರ್ಯದರ್ಶಿ ರಮೇಶ ಕೊಕ್ಕರಕಲ್,ಕೋಶಾಧಿಕಾರಿ ಪ್ರಕಾಶ ಸುವರ್ಣ,ಆಡಳಿತ ಮಂಡಳಿ ಸದಸ್ಯರಾದ ಶ್ರೀನಿವಾಸ ಪೂಜಾರಿ, ನರೇಂದ್ರ ಕೆರೆಕಾಡು,ರಂಗಕರ್ಮಿ ಪರಮಾನಂದ ಸಾಲ್ಯಾನ್,ವಿಜಯ ಕುಮಾರ್ ಕುಬೆವೂರು,ರಮಾನಾಥ ಸುವರ್ಣ,ಸೇವಾದಳದ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ,ಪ್ರಭಂದಕ ಸೋಮನಾಥ್ ಉಪಸ್ಥಿತರಿದ್ದರು, ನರೇಂದ್ರ ಕೆರೆಕಾಡು ನಿರೂಪಿಸಿದರು.

Mulki-23091502

Comments

comments

Comments are closed.

Read previous post:
Mulki-23091501
ಬೆಹರಿನ್‌ನಲ್ಲಿ ಯಕ್ಷೆತ್ಸವ 2015

ಮೂಲ್ಕಿ: ಬೆಹರಿನ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ಸಂಘಟಕ ಮತ್ತು ಸಮಾಜ ಸೇವಕ ಪಿ. ಕಿಶನ್ ಹೆಗ್ಡೆ ಬೈಲೂರು ಇವರನ್ನು ಬೆಹರಿನ್‌ನಲ್ಲಿ ನಡೆದ ಯಕ್ಷೆತ್ಸವ 2015 ನಡೆದ...

Close