ಮೂಲ್ಕಿ ಸಂಸ್ಮರ ಕಾರ್ಯಕ್ರಮ

ಮೂಲ್ಕಿ: ವೈದ್ಯರಾಗಿ ಸಮಾಜ ಸೇವಕರಾಗಿ ಸ್ವಾರ್ಥ ರಹಿತ ಸೇವೆ ಮಾಡಿ ಸಮಾಜದ ದೀನ ವರ್ಗದ ಅಭ್ಯುದಯಕ್ಕೆ ಶ್ರಮಿಸಿದ ಡಾ.ಕೆ.ಬಾಬು ಶೆಟ್ಟಿಯವರ ಬಗ್ಗೆ ಮುಂದಿನ ತಲೆಮಾರು ತಿಳಿದುಕೊಳ್ಳುವಂತೆ ಅವರ ಬಾವ ಚಿತ್ರವನ್ನು ಇರಿಸಿ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಶಾಲೆಗಳು ಹಾಗೂ ಅಂಗನವಾಡಿಯಲ್ಲಿ ಪ್ರತೀ ವರ್ಷ ನಡೆಸಲಾಗುವುದು ಎಂದು ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.
ಮೂಲ್ಕಿ ಕೆ.ಎಸ್.ರಾವ್ ನಗರದ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಮತ್ತು ಕೆ. ಬಾಬು ಶೆಟ್ಟಿಯವರ ಬಾವ ಚಿತ್ರ ಅನಾವರಣ ಗೊಳಿಸಿ ಮಾತನಾಡಿದರು.
ಮೂಲ್ಕಿ ಸುಂದರರಾಮ ಶೆಟ್ಟಿಯವರು ಗ್ರಾಮಿಣ ವರ್ಗದ ಜನರ ಸದುಪಯೋಗಕ್ಕಾಗಿ ವಿಜಯಾ ಬ್ಯಾಂಕ್ ಮುಖಾಂತರ ವಿಜಯಾ ರೈತರ ಪ್ರತಿಷ್ಠಾನ ಸ್ಥಾಪಿಸಿ ಬಳಿಕ ಸೇವಾ ಸಹಕಾರಿ ಸಂಸ್ಥೆಯ ನಿರ್ಮಾಣಕ್ಕೆ ಕಾರಣ ಕರ್ತರಾಗಿದ್ದು ಡಾ. ಬಾಬು ಶೆಟ್ಟಿಯವರು ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆಯ ವಿಸ್ತರಣೆಗೆ ಕಾರಣಕರ್ತರಾಗಿದ್ದಾರೆ.ಎಂದರು.
ಈ ಸಂದರ್ಭ ಬಾಬು ಶೆಟ್ಟಿಯವರ ಪುತ್ರರಾದ ಶಿವಪ್ರಸಾದ್ ಶೆಟ್ಟಿ ಮತ್ತು ಡಾ.ಹರಿಪ್ರಸಾದ್ ಶೆಟ್ಟಿಮ ವಿಜಾಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಆಡಳಿತ ನಿರ್ದೇಶಕರಾದ ದೇರಣ್ಣ ಶೆಟ್ಟಿ, ಪ್ರಬಂದಕ ಸುಧಾಕರ ಶೆಟ್ಟಿ, ಕೆ.ಎಸ್ ರಾವ್ ನಗರ ಶಾಖಾ ಪ್ರಭಂದಕ ರಾಮ ಮೂರ್ತಿ,ನಿರ್ದೇಶಕರಾದ ಪುಷ್ಪಾ ಮಡಿವಾಳ್ತಿ,ಪದ್ಮಿನಿ ಶೆಟ್ಟಿ, ವಿಠಲ, ನರಸಿಂಹ ಕೊತ್ಯಾರು, ಅಶೋಕ್ ಕುಮಾರ್ ಚಿತ್ರಾಪು, ಸಪಂ.ಸದಸ್ಯ ಶೈಲೇಶ್ಮ ಸಮಾಜ ಸೇವಕ ಇದಿನಬ್ಬ ಉಪಸ್ಥಿತರಿದ್ದರು ನವೀನ್ ಪುತ್ರನ್ ನಿರೂಪಿಸಿದರು.

Mulki-23091503

Comments

comments

Comments are closed.

Read previous post:
Mulki-23091502
ಮೂಲ್ಕಿ ಬಿಲ್ಲವ ಸಂಘದಲ್ಲಿ ಇಂಜಿನಿಯರ‍್ಸ್ ಡೇ

ಮೂಲ್ಕಿ: ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಗಳಿಸಿ ಅಭಿವೃದ್ಧಿ ಹೊಂದುವ ಜೊತೆಗೆ ಉಳಿದ ವಿದ್ಯಾರ್ಥಿಗಳಿಗೂ ಮಾರ್ಗದರ್ಶಕರಾಗ ಬೇಕು ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ...

Close