ಕಿನ್ನಿಗೋಳಿ: ವ್ಯ.ಸೇ.ಸ.ಬ್ಯಾಂಕ್ ಮಹಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾ ಸಭೆಯು ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್‌ನ ಸಹಕಾರಿ ಸೌಧ ಸಭಾಭವನದಲ್ಲಿ ನಡೆಯಿತು.
5511 ಮೆಂಬರುಗಳಿದ್ದು 12295390ರೂ ಪಾಲು ಬಂಡವಾಳವಿದೆ. ಸರ್ಕಾರಿ ಆದೇಶದಂತೆ ಕೃಷಿಕರಿಗೆ ಬೆಳೆಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡಲಾಗುತ್ತಿದೆ. ಸುಮಾರು 200 ಸ್ವಸಹಾಯ ಗುಂಪುಗಳಿದ್ದು ವರದಿ ವರ್ಷದಲ್ಲಿ 683500ರೂ. ಸಾಲ ವಿತರಿಸಲಾಗಿದೆ. ಬ್ಯಾಂಕ್ 6123262 ನಿವ್ವಳ ಲಾಭ ಗಳಿಸಿದ್ದು ಮಾರಾಟ ವಿಭಾಗದಲ್ಲಿ 483985 ಲಾಭ ಗಳಿಸಿರುತ್ತದೆ. ಮೆಂಬರುಗಳಿಗೆ 16% ಡಿವಿಡೆಂಟ್ ನೀಡಲಾಗುತ್ತಿದೆ. ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ ಮಾಡ ವಾರ್ಷಿಕ ವರದಿ ಮಂಡಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ರಘುರಾಮ ಅಡ್ಯಂತಾಯ, ಪುರಂದರ ಎಂ. ಶೆಟ್ಟಿ , ಪ್ರವೀಣ್ ಮಾಡ, ಲೋಕಯ್ಯ ಸಲ್ಯಾನ್, ನಾರಾಯಣ ಕುಂದರ್, ವನಜ ಎಸ್. ಶೆಟ್ಟಿ , ಮಾರ್ಗರೇಟ್ ವಾಸ್, ಶೀನ ಎಂ., ಶೇಷರಾಮ ಶೆಟ್ಟಿ ಉಪಸ್ಥಿತರಿದ್ದರು.
2015-16 ನೇ ಸಾಲಿನಲ್ಲಿ ೫ಕೋಟಿ ಠೇವಣಿ ಸಂಗ್ರಹ ಮಾಡುವುದು ಹಾಗೂ ಅಷ್ಟೆ ಮೊತ್ತ ಸಾಲ ನೀಡುವುದು, ಸ್ವಸಹಾಯ ಗುಂಪುಗಳನ್ನು ಬಲಪಡಿಸಿ ಅರ್ಹ ಗುಂಪುಗಳಿಗೆ ಸಾಲ ವಿತರಿಸುವುದು. ಎಲ್ಲಾ ರೈತ ವರ್ಗದ ಸದಸ್ಯರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಿ ಸಾಲ ನೀಡುವುದು.
ಬ್ಯಾಂಕ್ ಅಧ್ಯಕ್ಷ ಕೆ.ಲವ ಶೆಟ್ಟಿ ಸ್ವಾಗತಿಸಿದರು. ಪ್ರಬಂಧಕ ವಿವೇಕಾನಂದ ಕಾರ್ಯಕ್ರಮ ನಿರೂಪಿಸಿದರು. ಜೋಸೆಫ್ ಕ್ವಾಡ್ರಸ್ ವಂದಿಸಿದರು.

Kinnigoli-24091504

Comments

comments

Comments are closed.

Read previous post:
Kinnigoli-24091503
ವಿಶ್ವಕರ್ಮ ದೇವರ ಪೂಜೆ

ಕಿನ್ನಿಗೋಳಿ: ಕಟೀಲಿನಲ್ಲಿ ವಿಶ್ವಕರ್ಮ ಬ್ರಾಹ್ಮಣ ಸಮಾಜದ ವತಿಯಿಂದ ವಿಶ್ವಕರ್ಮ ದೇವರ ಪೂಜೆ ನಡೆಯಿತು.

Close