ಕೊಲ್ಲೂರು ಪಂಚಕರ್ಮ ಮತ್ತು ಯೋಗ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಆಧುನಿಕ ಬದುಕಿನ ಒತ್ತಡದಿಂದ ಹೊರ ಬರುವ ರಹದಾರಿ ಎನಿಸಿದ ಪಂಚಕರ್ಮ ಚಿಕಿತ್ಸೆ ಶ್ರೀಮಂತರಿಗೆ ಜೇಬಿಗೆ ಮಾತ್ರ ಎಟುಕುವ ಐಷಾರಾಮ ಎಂದು ಸಾಮಾನ್ಯರ ಭಾವನೆ. ಈಗ ಶ್ರೀಸಾಮಾನ್ಯನಿಗೂ ಕಡಿಮೆ ವೆಚ್ಚದಲ್ಲಿ ಪಂಚಕರ್ಮ ಚಿಕಿತ್ಸೆ ದೊರೆಯುವಂತೆ ಮಾಡಲು ಆಯಷ್ ಇಲಾಖೆ ಹಾಗೂ ಸರಕಾರ ಮುಂದಾಗಿದೆ ಎಂದು ಸಚಿವ ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ದ. ಕ. ಜಿ. ಪಂ. ಜಿಲ್ಲಾ ಆಯುಷ್ ಇಲಾಖೆಯ ಆಶ್ರಯದಲ್ಲಿ ಶನಿವಾರ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಪಂಚಕರ್ಮ ಮತ್ತು ಯೋಗ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಜಂಜಾಟ, ಒತ್ತಡ ಮತ್ತಿತರ ಸಮಸ್ಯೆಗಳಿಂದ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತದೆ. ಮನಸ್ಸು ಮತ್ತು ದೇಹದ ಆರೋಗ್ಯಕ್ಕಾಗಿ ಖರ್ಚಿಲ್ಲದ ಯೋಗ, ಪ್ರಾಣಾಯಾಮಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ದ.ಕ.ಜಿ.ಪಂ ಸದಸ್ಯೆ ಆಶಾ ರತ್ನಾಕರ ಸುವರ್ಣ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ದ.ಕ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಜನ್ ಚಂದ್ರರಾವ್, ದ.ಕ. ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೋ, ಬಳ್ಕುಂಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ ಎಸ್. ಕೋಟ್ಯಾನ್, ಪಂಚಾಯಿತಿ ಸದಸ್ಯರಾದ ಆನಂದ ಕೆ, ಗೀತಾ ಮತ್ತಿತರರು ಉಪಸ್ಥಿತರಿದ್ದರು.
ಕೊಲ್ಲೂರು ಸರಕಾರಿ ಆರ್ಯುವೇದ ಚಿಕ್ಸಿತ್ಸಾಲಯದ ವೈದ್ಯಾಧಿಕಾರಿ ಡಾ. ಶೋಭಾರಾಣಿ ಸ್ವಾಗತಿಸಿದರು. ಯಲ್ಲಪ್ಪ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-26091502 Kinnigoli-26091503 Kinnigoli-26091504

Comments

comments

Comments are closed.

Read previous post:
Kinnigoli-26091501
ಉದಯಕುಮಾರ ಹಬ್ಬು – ಕೃತಿಗಳ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ನಿವಾಸಿ ಹಿರಿಯ ಸಾಹಿತಿ ನಿವೃತ್ತ ಪ್ರಿನ್ಸಿಪಾಲ್ ಉದಯ ಕುಮಾರ್ ಹಬ್ಬು ರಚಿತ ಕೃತಿಗಳನ್ನು ಬುಧವಾರ ಬೆಂಗಳೂರಿನ ಮಹಾ ಬೋಧಿ ಸೊಸೈಟಿಯಲ್ಲಿ ಬಿಡುಗಡೆಗೊಳಿಸಲಾಯಿತು. ಮಹಾಬೋಧಿ ಸೊಸೈಟಿ ಸ್ಥಾಪಕ...

Close