ಉದಯಕುಮಾರ ಹಬ್ಬು – ಕೃತಿಗಳ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ನಿವಾಸಿ ಹಿರಿಯ ಸಾಹಿತಿ ನಿವೃತ್ತ ಪ್ರಿನ್ಸಿಪಾಲ್ ಉದಯ ಕುಮಾರ್ ಹಬ್ಬು ರಚಿತ ಕೃತಿಗಳನ್ನು ಬುಧವಾರ ಬೆಂಗಳೂರಿನ ಮಹಾ ಬೋಧಿ ಸೊಸೈಟಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಮಹಾಬೋಧಿ ಸೊಸೈಟಿ ಸ್ಥಾಪಕ ದಿ| ವಂದನೀಯ ಡಾ. ಬುದ್ಧರಕ್ಷಿತ ಅವರ ಎರಡನೆ ವರ್ಷದ ಪುಣ್ಯ ತಿಥಿಯ ಸ್ಮರಣಾಂಜಲಿ ಕಾರ್ಯಕ್ರಮದ ಸಂದರ್ಭ ಉದಯಕುಮಾರ ಹಬ್ಬು ಅವರ ಬುದ್ಧತ್ವ-ಸಂತೋಷಕ್ಕೊಂದೇ ದಾರಿ ಮತ್ತು ವಿಪಸ್ಸನ ಧ್ಯಾನ-ಅರಿವಿನ ದಾರಿ ಎರಡು ಕೃತಿಗಳು ಬಿಡುಗಡೆಗೊಂಡವು. ಅಸ್ಸಾಂ ಅಗ್ಗಮಹಾ ಸದ್ಧಮ್ಮ ಜೋತಿಕಾ ಇದರ ಅಧ್ಯಕ್ಷ ಅತಿ ವಂದನೀಯ ಮುಂಗ್ಲೆಂಗ್ ಸಯಡೊವ್ ಯು ಗುಣವಂತ ಮಹಾಥೇರ, ಅಖಿಲ ಅಸ್ಸಾಂ ಭಿಕ್ಕು ಸಂಘದ ಅಧ್ಯಕ್ಷ ವಂದನೀಯ ಬಲಿಪಥರ್ ಯು ವಿಚಿತ್ತ ಮಹಾಥೇರ, ಬಲಿಪಥರ್ ಸಯಡೊವ್, ವಂದನೀಯ ಕಸ್ಸಪ ಮಹಾಥೇರ ಮಹಾಬೋಧಿ ಸೊಸೈಟಿಯ ಮುಖ್ಯಸ್ಥರಾದ ಆನಂದ ಭಂತೇಜಿ ಉಪಸ್ಥಿತರಿದ್ದರು.

Kinnigoli-26091501

Comments

comments

Comments are closed.

Read previous post:
Mulki-26091501
ಮೂಲ್ಕಿ: ರಕ್ತದಾನ ಶಿಭಿರ

ಮೂಲ್ಕಿ: ನಿಯಮಿತ ರಕ್ತದಾನದಿಂದ ಹೊಸರಕ್ತ ಉತ್ಪನ್ನವಾಗಿ ಜೀವ ಚೈತನ್ಯ ಹೆಚ್ಚಾಗುವುದರ ಜೊತೆಗೆ ಇನ್ನೊಬ್ಬರನ್ನು ಉಳಿಸಿದ ಸಂತೃಪ್ತಿ ನಿಮ್ಮದಾಗುತ್ತದೆ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಸಮುದಾಯ ಶಾಸ್ತ್ರ...

Close