ಮೂಲ್ಕಿ: ರಕ್ತದಾನ ಶಿಭಿರ

ಮೂಲ್ಕಿ: ನಿಯಮಿತ ರಕ್ತದಾನದಿಂದ ಹೊಸರಕ್ತ ಉತ್ಪನ್ನವಾಗಿ ಜೀವ ಚೈತನ್ಯ ಹೆಚ್ಚಾಗುವುದರ ಜೊತೆಗೆ ಇನ್ನೊಬ್ಬರನ್ನು ಉಳಿಸಿದ ಸಂತೃಪ್ತಿ ನಿಮ್ಮದಾಗುತ್ತದೆ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಸಮುದಾಯ ಶಾಸ್ತ್ರ ವಿಭಾಗದ ವೈದ್ಯರಾದ ಡಾ. ನಿಶಾಂತ್ ಹೇಳಿದರು
ಮೂಲ್ಕಿ ವಿಜಯಾ ಕಾಲೇಜಿನ ಎನ್.ಸಿ.ಸಿ ಆರ್ಮಿ ಮತ್ತು ನೇವಿ,ರೋವರ‍್ಸ್ ಮತ್ತು ರೇಂಜರ‍್ಸ್,ರೆಡ್ ಕ್ರಾಸ್ ವಿಭಾಗದ ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಬಜಾಲ್ ಮತ್ತು ನವದುರ್ಗಾ ಯುವಕವೃಂದದ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಭಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವಂತ ಯುವ ಸಮಾಜ ನಿಯಮಿತವಾಗಿ ರಕ್ತದಾನ ಮಾಡಬಹುದು. ರಕ್ತದಾನದಿಂದ ಸೇರ್ಪಡೆಯಾಗುವ ಹೊಸರಕ್ತ ಜೈತನ್ಯಭರಿತವಾಗಿ ಆರೋಗ್ಯ ಹಾಗೂ ಬುದ್ದಿಮತ್ತೆಯ ಉನ್ನತಿಗೆ ಸಹಕಾರ ನೀಡುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು.
ಮೂಲ್ಕಿ ನಗರ ಪಂಚಾಯತಿ ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ,ಸಮುದಾಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಉದಯ ಕಿರಣ್,ಕಾಲೇಜು ಎನ್.ಸಿ.ಸಿ ನೇವಿ ಮುಖ್ಯಸ್ಥ ಲೆಪ್ಟಿನೆಂಟ್ ಹೆಚ್.ಜಿ ನಾಗರಾಜ ನಾಯಕ್, ಆರ್ಮಿ ವಿಭಾಗ ಮುಖ್ಯಸ್ಥ ಲೆಪ್ಟಿನೆಂಟ್ ರಾಜೇಶ್ ಶೆಟ್ಟಿಗಾರ್, ರೋವರ‍್ಸ್ ಮತ್ತು ರೇಂಜರ‍್ಸ್ ಮುಖ್ಯಸ್ಥ ಸೊಮಶೇಖರ ಭಟ್,ರೆಡ್‌ಕ್ರಾಸ್ ವಿಭಾಗ ಮುಖ್ಯಸ್ಥ ನಾಗರಾಜ ರಾವ್, ಕಾಲೇಜು ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಶೋಧನ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು.ನಾಗರಾಜ ರಾವ್ ನಿರೂಪಿಸಿದರು,ರಾಜೇಶ್ ಶೆಟ್ಟಿಗಾರ್ ವಂದಿಸಿದರು.

Mulki-26091501

Comments

comments

Comments are closed.

Read previous post:
Kinnigoli-24091504
ಕಿನ್ನಿಗೋಳಿ: ವ್ಯ.ಸೇ.ಸ.ಬ್ಯಾಂಕ್ ಮಹಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾ ಸಭೆಯು ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್‌ನ ಸಹಕಾರಿ ಸೌಧ...

Close