ಎಫ್ ಆರ್ ಪಿ ದೋಣಿ ವಿತರಣೆ

ಮೂಲ್ಕಿ: ಸಸಿಹಿತ್ಲು ಸಮುದ್ರ ತೀರದಲ್ಲಿ 4.5 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಯೋಜನೆ ಮಂಜೂರಾಗಿದ್ದು ಒಂದು ತಿಂಗಳ ಒಳಗೆ ಕಾಮಾಗಾರಿ ಆರಂಭಗೊಳ್ಳಲಿದೆ. ಪರಿಶಿಷ್ಟ ಜಾತಿಯ ಮೀನುಗಾರರ ಭವಿಷ್ಯದ ನಿಟ್ಟಿನಲ್ಲಿ ದೋಣಿ ನೀಡುವ, ನಾಲ್ಕು ಚಕ್ರದ ವಾಹನ ಖರೀದಿಸಲು ಶೇಕಡಾ 80 ಸಹಾಯಧನ ಹಾಗೂ ಎಫ್ ಆರ್ ಪಿ ಗಿಲ್ ನೆಟ್ ದೋಣಿ, ಬಲೆ ಮತ್ತು ಓ ಬಿ ಎಂ ಖರೀದಿಲು ಗರಿಷ್ಠ 4.5 ಲಕ್ಷ,ಶೇಕಡಾ 90 ಸಹಾಯ ಧನ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯ ಮೀನುಗಾರಿಕಾ ಮತ್ತು ಯುವಜನ ಸಚಿವರು ಹೇಳಿದರು.
2014-15 ರ ಸಾಲಿನ ದ.ಕ. ಜಿಲ್ಲೆಯ ಮೀನುಗಾರಿಕಾ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಮೂಲ್ಕಿಯ 7 ಮಂದಿ ಪರಿಶಿಷ್ಠ ಜಾತಿಯ ಮೀನುಗಾರರಿಗೆ ತಲಾ 25 ಸಾವಿರ ರೂ ವೆಚ್ಚದ ಎಫ್ ಆರ್ ಪಿ ದೋಣಿಗಳನ್ನು ಮೂಲ್ಕಿಯ ಕೊಳಚಿಕಂಬಳದ ಕಟ್ಟದಂಗಡಿಯ ಶಾಂಭವಿ ನದಿ ಬಳಿ ವಿತರಿಸಿ ಮಾತನಾಡಿದ ಅವರುಗ್ರಾಮೀಣ ಪ್ರದೇಶದ ಬಡ ಮೀನುಗಾರರ ಅಭಿವೃದ್ದಿಯ ನಿಟ್ಟಿನಲ್ಲಿ ಹೆಚ್ಚಿನ ಸವಲತ್ತುಗಳನ್ನು ನೀಡಲಾಗುವುದು ಕೊಳಚಿಕಂಬಳ ಚಿತ್ರಾಪು ಹಾಗೂ ಹಳೆಯಂಗಡಿ, ಸಸಿಹಿತ್ಲು ಸಂಪರ್ಕ ರಸ್ತೆ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸುವ ಬಗ್ಗೆ ತಿಳಿಸಿದರು. ಮೂಲ್ಕಿಯ ಕೊಳಚಿಕಂಬಳದ ಬಳಿ ಶಾಂಭಿ ಮತ್ತು ನಂದಿನಿ ನದಿ ಸಮುದ್ರ ಸೇರುವ ಅಳಿವೆ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರವಾಸಿ ತಾಣ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಂ ಡಿ ಪ್ರಸಾದ್, ಸಹಾಯಕ ನಿರ್ದೇಶಕಿ ಸುಶ್ಮಿತಾ ರಾವ್, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮಾಜಿ ಅಧ್ಯಕ್ಷ ಬಿ ಎಂ ಆಸೀಫ್, ಮಾಜಿ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ, ಸದಸ್ಯ ಪುತ್ತುಬಾವು, ಸ್ಥಳೀಯರಾದ ಹರಿಶ್ಚಂದ್ರ ಪಿ.ಸಾಲ್ಯಾನ್, ಯೋಗೀಶ್ ಕೋಟ್ಯಾನ್ ಹರೀಶ್ ಕೊಳಚಿಕಂಬಳ ಮತ್ತಿತರರು ಉಪಸ್ತಿತರಿದ್ದರು.

Mulki-30091504

Comments

comments

Comments are closed.

Read previous post:
Mulki-30091503
ಪೌರ ಕಾರ್ಮಿಕರ ದೀನಾಚರಣೆ

ಮೂಲ್ಕಿ: ಬೆಳೆಯುತ್ತಿರುವ ಮೂಲ್ಕಿ ನಗರಕ್ಕೊಂದು ಸ್ಕೇಟಿಂಗ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ರೀಡಾ ಇಲಾಖೆಯಿಂದ 25 ಲಕ್ಷ ರೂಪಾ ಅನುದಾನ ಮೀಸಲಿರಿಸಿದ್ದು, ಪಂಚಾಯತಿ ಸೂಕ್ತ ಜಾಗ ನೀಡಿದಲ್ಲಿ ಶೀಘ್ರ ಕ್ರೀಡಾಂಗಣ...

Close