ಉತ್ತಮ ಶಿಕ್ಷಣದಿಂದ ಬಡತನ ನಿವಾರಣೆ

ಮೂಲ್ಕಿ: ರಾಜ್ಯದ ಬಡ ವರ್ಗದ ಜನತೆಯನ್ನು ಹಸಿವು ಮುಕ್ತ ಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಹಾಗೂ ವಿದ್ಯೆ ದೊರಕಿಸಿ ಉತ್ತಮ ಶಿಕ್ಷಣದಿಂದ ಬಡತನ ನಿವಾರಣೆ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಯವರು ಹಮ್ಮಿಕೊಂಡಿದ್ದಾರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವರು ಹೇಳಿದರು.
ಮೂಲ್ಕಿಯ ಕೆ ಎಸ್ ರಾವ್ ನಗರದ ದ.ಕ.ಜಿ.ಪ ಸರ್ಕಾರಿ ಫ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ಸೈಕಲ್ ಗಳನ್ನು ವಿತರಿಸಿ ಮಾತನಾಡಿದರು. ಶಾಲೆಯ ಪ್ರಾಥಮಿಕ ಶಾಲಾ ಕಟ್ಟಡದ ದುರಸ್ತಿಗೆ ರೂ 5ಲಕ್ಷ ಅನುದಾನ ಈಗಾಗಲೇ ಒದಗಿಸಲಾಗಿದೆ. ಶಾಲೆಯನ್ನು ಸಂಪೂರ್ಣ ಅಭಿವೃದ್ಧಿ ಗೊಳಿಸಲು ರೂ 25 ಲಕ್ಷ ರೂ ಜೊತೆಗೆ ಕ್ರೀಡಾಂಗಣ ಅಭಿವೃದ್ಧಿಗಾಗಿ ರೂ 3ಲಕ್ಷ ಒದಗಿಸಲಾಗುವುದು.ರೂ 76 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡ ಶಾಲೆಯ ಫ್ರೌಢ ಶಾಲೆಯ ಕಟ್ಟಡದ ಉದ್ಘಾಟನೆಯನ್ನು ಶೀಘ್ರದಲ್ಲಿ ರಾಜ್ಯ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ನೆರವೇರಿಸಲಿದ್ದಾರೆ ಎಂದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ ಬಾಯಿ, ಫ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿಂದ್ಯಾ ಕಿಣಿ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮುಖ್ಯಾಧಿಕಾರಿ ವಾಣಿ ಆಳ್ವ, ಮಾಜಿ ಅಧ್ಯಕ್ಷ ಬಿ ಎಂ ಆಸೀಫ್, ನಾಮ ನಿರ್ದೇಶಿತ ಸದಸ್ಯ ಯೋಗೀಶ್ ಕೋಟ್ಯಾನ್, ಡಾ.ಹರಿಪ್ರಸಾದ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭೀಮಾ ಶಂಕರ ಆರ್ ಕೆ, ಇಡಿನಬ್ಬ, ಪಂಚಾಯತಿ ಸದಸ್ಯರು ಮತ್ತಿತರರು ಉಪಸ್ತಿತರಿದ್ದರು. ನವೀನ್ ಪುತ್ರನ್ ನಿರೂಪಿಸಿದರು.

Bhagyavan Sanil

Mulki-30091505

Comments

comments

Comments are closed.

Read previous post:
Mulki-30091504
ಎಫ್ ಆರ್ ಪಿ ದೋಣಿ ವಿತರಣೆ

ಮೂಲ್ಕಿ: ಸಸಿಹಿತ್ಲು ಸಮುದ್ರ ತೀರದಲ್ಲಿ 4.5 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಯೋಜನೆ ಮಂಜೂರಾಗಿದ್ದು ಒಂದು ತಿಂಗಳ ಒಳಗೆ ಕಾಮಾಗಾರಿ ಆರಂಭಗೊಳ್ಳಲಿದೆ. ಪರಿಶಿಷ್ಟ ಜಾತಿಯ ಮೀನುಗಾರರ...

Close