ಪೌರ ಕಾರ್ಮಿಕರ ದೀನಾಚರಣೆ

ಮೂಲ್ಕಿ: ಬೆಳೆಯುತ್ತಿರುವ ಮೂಲ್ಕಿ ನಗರಕ್ಕೊಂದು ಸ್ಕೇಟಿಂಗ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ರೀಡಾ ಇಲಾಖೆಯಿಂದ 25 ಲಕ್ಷ ರೂಪಾ ಅನುದಾನ ಮೀಸಲಿರಿಸಿದ್ದು, ಪಂಚಾಯತಿ ಸೂಕ್ತ ಜಾಗ ನೀಡಿದಲ್ಲಿ ಶೀಘ್ರ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಮೀನುಗಾರಿಕೆ ಯುವಜನ ಮತ್ತು ಕ್ರೀಡಾ ಸಚಿವರು ಹೇಳಿದರು.
ಮೂಲ್ಕಿ ಸಮುದಾಯ ಭವನದಲ್ಲಿ ಪೌರ ಕಾರ್ಮಿಕರ ದೀನಾಚರಣೆ ಪ್ರಯುಕ್ತ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಾಲ ಮನ್ನಾ ಪತ್ರ ವಿತರಣೆ ಹಾಗೂ ವಿವಿಧ ಸವಲತ್ತು ವಿತರಿಸಿ ಅವರು ಮಾತನಾಡಿದರು.
ಮೂಲ್ಕಿ ನಗರವನ್ನು ಪೋಡಿಮುಕ್ತ ನಗರವನ್ನಾಗಿಸಲಾಗುವುದು. ಇಲ್ಲಿನ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ನಗರದ ಬಹುದೊಡ್ಡ ಸಮಸ್ಯೆಯಾದ ಒಳಚರಂಡಿ ಯೋಜನೆಗೆ ಸಾಕಷ್ಟು ಅನುದಾನ ಒದಗಿಸಲು ಬದ್ಧನಿದ್ದೇನೆ ಎಂದರು.
ಇದೇ ಸಂದರ್ಭ 141 ಅರ್ಹ ಫಲಾನುಭವಿಗಳಿಗೆ ಸುಮಾರು 65 ಲಕ್ಷ ರೂಪಾ ಮೌಲ್ಯದ ಸಾಲ ಮನ್ನಾ ಪತ್ರ ವಿತರಿಸಿದರು. ವಿಕಲಚೇತನರಿಗೆ 3 ಲಕ್ಷ ರೂಪಾ ಯಿಯ ಪೋಷಣಾ ಭತ್ತೆ, ಪರಿಷಿಷ್ಟ ಜಾತಿ ಮತ್ತು ಪಂಗಡದವರಿಗೆ 2.80 ಲಕ್ಷ ರೂಪಾ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಪೌರ ಕಾರ್ಮಿಕ ದಿನಾಚರಣೆ: ಅಂಗವಾಗಿ 30 ಪೌರ ಕಾರ್ಮಿಕರಿಗೆ ತಲಾ 3 ಸಾವಿರ ರೂ.ನಂತೆ ಉಪಹಾರ ಭತ್ತೆ ವಿತರಿಸಲಾಯಿತು. ಬಳಿಕ ಪೌರಕಾರ್ಮಿಕರಿಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಭಿರ ನಡೆಯಿತು.
ಮೂಲ್ಕಿ ನ.ಪಂ.ಅಧ್ಯಕ್ಷೆ ಮೀನಾಕ್ಷಿ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಸಂತಿ ಭಂಡಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ, ಮುಖ್ಯಾಧೀಕಾರಿ ವಾಣಿ ಆಳ್ವ, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗ ಮುಖ್ಯಸ್ಥ ಡಾ.ಹಾಲಪ್ಪನವರ್ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯಾಧಿಕಾರಿ ವಾಣಿ ಆಳ್ವಾ ನಿರೂಪಿಸಿದರು.

Bhagyavan Sanil

Mulki-30091503

Comments

comments

Comments are closed.

Read previous post:
Mulki-30091502
ಕಾಂಕ್ರೀಟ್ ರಸ್ತೆ-ಗುದ್ದಲಿ ಪೂಜೆ

ಮೂಲ್ಕಿ: ಅತಿಕಾರಿ ಬೆಟ್ಟು ಗ್ರಾಮದ ದೆಪ್ಪುಣಿ ಗುತ್ತು ರಸ್ತೆಯನ್ನು ಪಿಡಬ್ಲುಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಧಿಯ ಆಶ್ರಯದಲ್ಲಿ ರೂ 10ಲಕ್ಷ ವೆಚ್ಚದಲ್ಲಿ 185 ಮೀಟರ್ ಕಾಂಕ್ರೀಟ್...

Close