ರೋಟರಿ ಸಮುದಾಯ ದಳ ಪದಗ್ರಹಣ

ಮೂಲ್ಕಿ: ಗ್ರಾಮೀಣ ಪ್ರದೇಶದ ಯುವ ಸಮಾಜವನ್ನು ಸಂಘಟಿಸಿ ಸೇವಾ ಮನೋಭಾವನೆಯ ಸಹಿತ ಸಹಾಯ ಸಹಕಾರ ನೀಡಲು ರೋಟರಿಯು ಸಮುದಾಯದಳವನ್ನು ರೂಪುಗೊಳಿಸಿದೆ ಎಂದು ರೋಟರಿ ಜಿಲ್ಲೆ 3180 ಇದರ ವಲಯ 3ರ ವಲಯ ಸೇನಾನಿ ಜೋಯಲ್ ಡಿಸೋಜಾ ಹೇಳಿದರು.
ಮೂಲ್ಕಿ ರೋಟರೀ ಕ್ಲಬ್ ಆಶ್ರಯದಲ್ಲಿ ರೋಟರಿ ಶತಾಬ್ದ್ದಿ ಭವನದಲ್ಲಿ ರೋಟರಿ ಸಮುದಾಯ ದಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣಾಧಿಕಾರಿಯಾಗಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆ ಬಗ್ಗೆ ಸಮುದಾಯ ದಳದ ಸದಸ್ಯರು ಅಥೈಸಿಕೊಂಡು ರೋಟರಿಯೊಂದಿಗೆ ಸಹಕಾರ ನೀಡುವಲ್ಲಿ ಶ್ರಮಿಸಬೇಕು ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಸೇವೆ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ ವಹಿಸಿದ್ದರು. ಈ ಸಂದರ್ಭ ರೋಟರಿ ಸಮುದಾಯ ದಳ ತೋಕೂರು ಮತ್ತು ನಡಿಕುದ್ರು ಇದರ 2015-16 ನೇ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ನಡೆಯಿತು. ತೋಕೂರು ಸಮುದಾಯದಳ ಇದರ ಅಧ್ಯಕ್ಷರಾಗಿ ಆರ್. ಎನ್. ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ರಾಮಚಂದ್ರ ಪಿ.ಶೆಟ್ಟಿ, ಖಜಾಂಚಿ ಬಿ. ದುರ್ಗಾಪ್ರಸಾದ್ ಶೆಟ್ಟಿ, ನಡಿಕುದ್ರು ಸಮುದಾಯ ದಳ ಇದರ ಅಧ್ಯಕ್ಷರಾಗಿ ನಿಶಾಲ್ ಯು. ಅಮೀನ್, ಕಾರ್ಯದರ್ಶಿ ಧನುಷ್, ಖಜಾಂಚಿ ರಾಜೇಶ್ ಸನಿಲ್ ಇವರು ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ, ಬಾಲಚಂದ್ರ ಸನಿಲ್, ವಿಲ್‌ಹೆಲ್ಮ್ ಮಾಬೆನ್, ವೈ.ಎನ್ ಸಾಲ್ಯಾನ್, ಅಬ್ಬಾಸ್ ಆಲಿ, ಅಬ್ದುಲ್ ರಹಿಮಾನ್, ಜಾನ್‌ವಿಲ್ಸನ್ ಡಿಸೋಜಾ, ಎಂ. ನಾರಾಯಣ, ಹೆಜಮಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ವಾಮನ್ ಕೋಟ್ಯಾನ್ ನಡಿಕುದ್ರು , ಪ್ರಮೀಳಾ ಡಿ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಚಂದ್ರಮೋಹನ್ ಅಂಚನ್ ನೆರವೇರಿಸಿದರು. ರೋಟರಿ ಅಧ್ಯಕ್ಷ ರವಿಚಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು.

Bhagyavan Sanil

Mulki-30091501

Comments

comments

Comments are closed.

Read previous post:
Kinnigoli-26091502
ಕೊಲ್ಲೂರು ಪಂಚಕರ್ಮ ಮತ್ತು ಯೋಗ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಆಧುನಿಕ ಬದುಕಿನ ಒತ್ತಡದಿಂದ ಹೊರ ಬರುವ ರಹದಾರಿ ಎನಿಸಿದ ಪಂಚಕರ್ಮ ಚಿಕಿತ್ಸೆ ಶ್ರೀಮಂತರಿಗೆ ಜೇಬಿಗೆ ಮಾತ್ರ ಎಟುಕುವ ಐಷಾರಾಮ ಎಂದು ಸಾಮಾನ್ಯರ ಭಾವನೆ. ಈಗ ಶ್ರೀಸಾಮಾನ್ಯನಿಗೂ ಕಡಿಮೆ...

Close