ಅಪ್ಪು ಪೂಜಾರಿಗೆ ಸನ್ಮಾನ

ಮೂಲ್ಕಿ: ಮೂಲ್ಕಿ ಮೂರ್ತೇದಾರರ ಸೇವಾಸಹಕಾರಿಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಯದೀಶ್ ಎಸ್ ಅಮೀನ್‌ರವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರೀ ವಿಜಯಕುಮಾರ್ ಕುಬೆವೂರು ಗತವರ್ಷದ ವರದಿ, ಲೆಕ್ಕಪತ್ರ, ಮುಂಗಡ ಪತ್ರ, ಲೆಕ್ಕಪರಿಶೋದನ ವರದಿಗಳನ್ನು ಸಭೆಯ ಮುಂದಿಟ್ಟು ಆಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶೇಕಡಾ 20 ಡಿವಿಡೆಂಟ್ ಘೋಷಣೆ ಮಾಡಲಾಯಿತು. ಸಂಘದ ಹಿರಿಯ ನಿವೃತ್ತ ಮೂರ್ತೇದಾರರು ಸ್ಥಾಪಕ ಅಧ್ಯಕ್ಷರಾಗಿ 24ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರುಗಳಾದ ಕೆ. ರಾಘು ಸುವರ್ಣ, ರಮೇಶ್ ಜಿ ಸುವರ್ಣ, ಹರೀಂದ್ರ ಸುವರ್ಣ, ಸುಧಾಕರ ಜೆ. ಸುವರ್ಣ, ಗಣೇಶ ಕುಕ್ಯಾನ್, ಸದಾನಂದ ಪೂಜಾರಿ, ಸುನೀತ ಡಿ ಮೂಲ್ಕಿ, ಚರೀಷ್ಮ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರಾದ  ಎಂ ಚಂದ್ರಶೇಖರ ಸುವರ್ಣರು ವಂದಿಸಿದರು.

Mulki-30091506

Comments

comments

Comments are closed.

Read previous post:
Mulki-30091505
ಉತ್ತಮ ಶಿಕ್ಷಣದಿಂದ ಬಡತನ ನಿವಾರಣೆ

ಮೂಲ್ಕಿ: ರಾಜ್ಯದ ಬಡ ವರ್ಗದ ಜನತೆಯನ್ನು ಹಸಿವು ಮುಕ್ತ ಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಹಾಗೂ ವಿದ್ಯೆ ದೊರಕಿಸಿ ಉತ್ತಮ ಶಿಕ್ಷಣದಿಂದ ಬಡತನ ನಿವಾರಣೆ ಯೋಜನೆಯನ್ನು...

Close