ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕರಿಸಿ

ಕಿನ್ನಿಗೋಳಿ: ಸಹಕಾರಿ ಸಂಘಗಳು ರೈತರು ಮತ್ತು ಸಾಮಾನ್ಯ ಜನರ ವಿಶ್ವಾಸ ಗಳಿಸಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕು ಎಂದು ಜಿ.ಪಂ. ಸದಸ್ಯ ಈಶ್ವರ್ ಕಟೀಲ್ ಹೇಳಿದರು.
ಬುಧವಾರ ನಡೆದ ಶ್ರೀ ಕಟೀಲು ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಬ್ಯಾಂಕಿನ 2014-15ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.
ಬ್ಯಾಂಕಿನ ಅಧ್ಯಕ್ಷ ಸಂಜೀವ ಮಡಿವಾಳ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಹಣಾಕಾರಿ ಉಷಾ ಅವರು 2014-15ನೇ ಸಾಲಿನ ಆರ್ಥಿಕ ತಖ್ತೆ, ಲೆಕ್ಕಪರಿಶೋಧನೆ ವರದಿ ಹಾಗೂ 2015-16 ನೇ ಸಾಲಿನ ಅಂದಾಜು ಆಯವ್ಯಯ ಬಜೆಟನ್ನು ವರದಿ ಮಂಡಿಸಿದರು. ಬ್ಯಾಂಕು 4,70,78,559ರೂ.ಗಳ ಠೇವಣಾತಿಗಳು ಸಂಗ್ರಹವಾಗಿದ್ದು 1,78,54,050ರೂ.ಗಳ ಸಾಲಗಳನ್ನು ವಿತರಿಸಿ ಒಟ್ಟು 6,47,134ರೂ.ಗಳ ನಿವ್ವಳ ಲಾಭ ಗಳಿಸಿರುತ್ತದೆ. ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ. 12ರ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಅರ್ಹ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂದರ್ಭ ಸ್ಪೋರ್ಟ್ಸ್ ಪ್ಲಸ್ ಅವಾರ್ಟ್ ವಿಜೇತ ಹಾಗೂ ಸಂಘದ ಮಾಜಿ ನಿರ್ದೇಶಕ ಈಶ್ವರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು. ಕಂಪ್ಯೂಟರಿಕೃತ ಪಾಸ್ ಪುಸ್ತಕ ಯಂತ್ರ ಅಳವಡಿಕೆಗೆ ಚಾಲನೆ ನೀಡಲಾಯಿತು.
ಮುಂದಿನ ವರ್ಷ ಹೆಚ್ಚಿನ ಠೇವಣಿ ಸಂಗ್ರಹ ಹಾಗೂ ಸಾಲ ನೀಡಲು ಯೋಜನೆ, ಯಶಸ್ವಿನಿ ಯೋಜನೆ, ಸ್ವಉದ್ಯೋಗ, ಹೈನುಗಾರಿಕೆಗೆ ಪ್ರೋತ್ಸಾಹ ಹಾಗೂ ಸಂಘದ ಕಾರ್ಯಕ್ಷೇತ್ರದಲ್ಲಿ ಸ್ವಸಹಾಯ ಗುಂಪುಗಳಿಗೆ ಉತ್ತೇಜನ ಬಗ್ಗೆ ತೀರ್ಮಾನ ಮಾಡಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಸ್ಟ್ಯಾನಿ ಪಿಂಟೋ, ನಿರ್ದೇಶಕರುಗಳಾದ ಯಶೋದ ಆರ್, ಕೆ.ಬಿ.ಸುರೇಶ್, ರಾಮದಾಸ ಕಾಮತ್, ಸುಜಾತ, ರಮೇಶ ಕೆ. ರಿಚಾರ್ಡ್ ಸಲ್ಡಾನ, ಪ್ರವೀಣ್ ಸಾಲ್ಯಾನ್ ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಉಷಾ ಕಾರ್ಯಕ್ರಮ ನಿರ್ವಹಿಸಿದರು.

Kateel-02101501

Comments

comments

Comments are closed.

Read previous post:
Mulki-30091506
ಅಪ್ಪು ಪೂಜಾರಿಗೆ ಸನ್ಮಾನ

ಮೂಲ್ಕಿ: ಮೂಲ್ಕಿ ಮೂರ್ತೇದಾರರ ಸೇವಾಸಹಕಾರಿಸಂಘದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಯದೀಶ್ ಎಸ್ ಅಮೀನ್‌ರವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ...

Close