ಕೃಷಿ ಬದುಕಿನ ಸಂತೃಪ್ತಿ ಜೀವನ

ಕಿನ್ನಿಗೋಳಿ : ಕೈ ತುಂಬಾ ಸಂಬಳದ ಬದುಕನ್ನು ಬಿಟ್ಟು ಸರಳತೆಯ ಕೃಷಿ ಹೊಲದ ದುಡಿಮೆಯಲ್ಲಿ ಬದುಕಿನ ಸಂತೃಪ್ತಿ ಜೀವನ ಪಡೆಯುವುದೇ ಸಾರ್ಥಕ ಜೀವನ ಕಟ್ಟಿಕೊಂಡ ಯುವಕ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಕಿನ್ನಿಗೋಳಿ ಸಮೀಪದ ಮೂರು ಕಾವೇರಿಯ ಜೈಸನ್ ಬರ್ನಾಡ್.
ಕೃಷಿಯಲ್ಲಿ ಕೈ ತುಂಬಾ ಹಣ ಗಳಿಸಬಹುದು ಎಂಬುದನ್ನು ಸಾಸಿ ತೋರಿಸಿದ್ದಾರೆ. ತರಕಾರಿ ಗಿಡಗಳ ಮದ್ಯೆ ತಮ್ಮ ಕೆಲಸವನ್ನು ನಿರ್ವಹಿಸಿ ಪ್ರಕೃತಿಯ ಸಿಹಿ ಸವಿಯನ್ನುಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ ವ್ಯಾಸಾಂಗ ಮಾಡಿ ಬೆಂಗಳೂರಿನಲ್ಲಿ ಎಂ.ಎನ್.ಸಿ ಕಂಪನಿಯಲ್ಲಿ ಉದ್ಯೋಗವನ್ನು ಪಡೆದು ಕೈತುಂಬಾ ಸಂಬಳವನ್ನು ಪಡೆಯುತ್ತಿದ್ದರು. ಚಿಕ್ಕಂದಿನಲ್ಲಿಯೇ ಕೃಷಿಯ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಜೈಸನ್ ಆಗಾಗ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿ ತಮ್ಮಲ್ಲಿ ಕೃಷಿಯ ಬಗ್ಗೆ ಕೂಲಂಕುಷವಾಗಿ ಅರಿತು ಸಾವಯವ ಕೃಷಿಯಲ್ಲಿ ಕಡಿಮೆ ಪರಿಶ್ರಮದಲ್ಲಿ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಜ್ಞಾನ ಪಡೆದುಕೊಂಡರು.
ನಗರದ ಯಾಂತ್ರಿಕ ಜೀವನ ಶೈಲಿಯನ್ನು ಬಿಟ್ಟು ಮಾನಸಿಕ ನೆಮ್ಮದಿಯ ವಾತಾವರಣ ಕಲ್ಪಿಸುವ ಕೃಷಿ ಜೀವನದಲ್ಲಿ ಆಸಕ್ತಿ ಬೆಳೆಸಿ ತಮ್ಮ ಹಿರಿಯ ತಲೆಮಾರಿನಿಂದ ಬಂದ ಕುಟುಂಬದ ಜಮೀನಿನಲ್ಲಿ ಕೃಷಿ ಕಾರ್ಯ ಮಾಡುವ ಹಂಬಲದಿಂದ ಕೈತುಂಬಾ ಸಂಬಳ ಪಡೆಯುವ ಕಂಪನಿಯನ್ನು ಬಿಟ್ಟು ತನ್ನ ಊರಿಗೆ ವಾಪಸಾದರು. ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಂಗಳೂರಿನಿಂದ ಉತ್ತಮ ತಳಿಯ ತರಕಾರಿ ಬೀಜಗಳನ್ನು ಆಯ್ಕೆ ಮಾಡಿ ತಂದು ತರಕಾರಿ ಕೃಷಿ ಮಾಡಿ ಯಶಸ್ಸನ್ನು ಕಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಂಡೆ ಮತ್ತು ಶುಂಠಿಯನ್ನು ಬೆಳೆದಿದ್ದಾರೆ ಅಲ್ಲದೆ ಪರ್ಯಾಯಯಾಗಿ ಸೌತೆಕಾಯಿ, ಅಲಸಂಡೆ, ಮರಗೆಣಸು ಮುಂತಾದ ತರಕಾರಿ ಬೆಳೆಸಿದ್ದಾರೆ.
ಜೂನ್ ತಿಂಗಳಲ್ಲಿ ಶುಂಠಿ ಬೀಜಗಳನ್ನು ಹಾಕಿ ನಂತರ ಅದೇ ಸಾಲಿನಲ್ಲಿ ಬೆಂಡೆ ಬೀಜವನ್ನು ಹಾಕಿದ್ದಾರೆ ಒಂದೋಂದು ಸಾಲಿನಲ್ಲಿ ಎರಡೆರಡು ಬೆಳೆ ಬೆಳೆದರೆ ಕಡಿಮೆ ಖರ್ಚಿನಿಂದ ಹೆಚ್ಚು ಆದಾಯಗಳಿಸಬಹುದು ಎನ್ನುತಾರೆ ಜೈಸನ್.
ಈದೀಗ ದಿನವೊಂದಕ್ಕೆ ಸುಮಾರು 150 ಕಿಲೋ ಬೆಂಡೆ ಇಳುವರಿ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಪ್ರತೀ ಕಿಲೋಗೆ 40 ರೂಪಾಯಿ ಅಂದರೆ ದಿನಕ್ಕೆ ಆರು ಸಾವಿರ ದಿನದ ಆದಾಯ ಬರುತ್ತಿದೆ. ಬೇರೆ ಬೇರೆ ಬೆಳೆಯಿಂದ ವಿವಿಧ ರೀತಿಯ ಆದಾಯ ಬರುತ್ತಿದೆ ಸುಮರು 70ರಿಂದ 80 ಸಾವಿರ ರೂಪಾಯಿ ಖರ್ಚು ಮಾಡಿ ಸುಮಾರು 3 ಲಕ್ಷ ಆದಾಯ ಗಳಿಸುvತ್ತಾರೆ.
ಮುಂದಿನ ಡಿಸೆಂಬರ್ ಒಳಗೆ ಎಲ್ಲ ಬೆಳೆಗಳ ಇಳುವರಿ ಮುಗಿದ ನಂತರ ಅರಿವೆಯನ್ನು ಬೆಳೆಸಿ ಎಲ್ಲಾ ಋತುಗಳಲ್ಲಿ ಆದಾಯ ಗಳಿಸುವ ಯೋಜನೆಯಲ್ಲಿದ್ದಾರೆ. ಈ ಎಲ್ಲಾ ಸಾಧನೆಗಳಿಗೆ ಮನೆಯವರ ಪ್ರೋತ್ಸಾಹ ಇದೆ ಎನ್ನುವ ಜೈಸನ್ ಅವರಿಗೆ ಮುಂದಿನ ದಿನಗಳಲ್ಲಿ ಯೂರೋಪ್ ನಂತಹ ದೇಶಗಳಿಗೆ ಹೋಗಿ ಕೃಷಿ ತಂತ್ರಜ್ಞಾನದ ಬಗ್ಗೆ ಸಂಶೋಧನೆ ಮಾಡಬೇಕೆಂಬ ಹಂಬಲ ಅವರಿಗಿದೆ.
ಇಂದಿನ ಯುವ ಜನತೆ ತಮ್ಮ ದೇಹದ ಕ್ಷಮತೆಗಾಗಿ ವ್ಯಾಯಾಮ ಶಾಲೆಗಳಿಗೆ ಹೋಗುವ ಬದಲು ಕೃಷಿಯಲ್ಲಿ ತೊಡಗಿಸಿಕೊಂಡು ಆರೋಗ್ಯ, ಮಾನಸಿಕ ನೆಮ್ಮದಿ ಜೊತೆಗೆ ಆದಾಯವನ್ನು ಗಳಿಸ ಬಹುದು ಎನ್ನುತ್ತಾರೆ ಜೈಸನ್. ರೈತ ದೇಶದ ಬೆನ್ನೆಲುಬು ಎಂದು ಹೇಳುವ ಜನನಾಯಕರು ಮತ್ತು ಸರಕಾರ ಇಂತಹ ಸಾಧಕರಿಗೆ ಪ್ರೊತ್ಸಾಹ ನೀಡಬೇಕಾಗಿದೆ. ಐಷಾರಾಮದ ಸಂಬಳ ಬಿಟ್ಟು ಕೃಷಿ ಕಾಯಕದಲ್ಲಿ ತೊಡಗಿದ ಜೈಸನ್ ಸಾಧನೆಯನ್ನು ಮೆಚ್ಚಲೇ ಬೇಕು.

Kinnigoli-02101506 Kinnigoli-02101507 Kinnigoli-02101508 Kinnigoli-02101509

Comments

comments

Comments are closed.

Read previous post:
Kinnigoli-02101505
ಸರಕಾರದ ಯೋಜನೆ ಜನಸಾಮಾನ್ಯರಿಗೆ ತಲುಪಬೇಕು

ಕಿನ್ನಿಗೋಳಿ: ಪಂಜ ಕೊಕುಡೆ ಶ್ರೀ ಹರಿಪಾಸ ಜಾರಂತಾಯ ಯುವಕ ಮಂಡಲ(ರಿ) ಹಾಊ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ ಇದರ ಆಶ್ರಯದಲ್ಲಿ ಮೊಸರುಕುಡಿಕೆಯ ಸುವರ್ಣ ಮಹೋತ್ಸವವು ಗುರುವಾರ ನಡೆಯಿತು....

Close