ಬಲ್ಲಣದಲ್ಲಿ ಬಾವಿಗೆ ಬಿದ್ದ ದನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಲ್ಲಣ ಬಳಿಯ ಮಾರ್ಷಲ್ ಡಿಸೋಜ ಅವರ ಮನೆಯ ಜಾಗದ 30 ಅಡಿ ಆಳದ ಎರಡು ಕಲ್ಲಿನ ಆವರಣದ ಬಾವಿಗೆ ಲೂಕಸ್ ಸಲ್ಡಾನ ಅವರ ಮೇಯಲು ಬಿಟ್ಟ ದನ ಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಸ್ಥಳೀಯ ಯುವಕರು ಅಗ್ನಿಶಾಮಕ ದಳದವರು ಬರುವುದರೊಳಗೆ ದನ ಮುಳುಗುವುದನ್ನು ತಡೆಗಟ್ಟಿಲು ಹಗ್ಗದ ಸಹಾಯದ ಆಧಾರದಲ್ಲಿ ಅರ್ಧ ಗಂಟೆಯ ಕಾಲ ಶ್ರಮ ಪಟ್ಟು ದನವನ್ನು ಹಿಡಿದಿಟ್ಟಿದ್ದರು. ಅಗ್ನಿಶಾಮಕ ದಳದವರು ತ್ವರಿತವಾಗಿ ಆಗಮಿಸಿ ದನ ಮೇಲಕ್ಕೆ ಎತ್ತಿದರು. ಐದು ತಿಂಗಳ ಗಬ್ಬದ ದನ ಪವಾಡ ಸೃದಶವಾಗಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದೆ.

Kinnigoli-03101506 Kinnigoli-03101507 Kinnigoli-03101508 Kinnigoli-03101509 Kinnigoli-031015010 Kinnigoli-031015011 Kinnigoli-031015012 Kinnigoli-031015013 Kinnigoli-031015014 Kinnigoli-031015015

Comments

comments

Comments are closed.

Read previous post:
Kinnigoli-03101505
ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ: ಸ್ವಚ್ಚತೆ ಮತ್ತು ಮಾಲಿನ್ಯ ಮುಕ್ತ ಪರಿಸರವೇ ಆರೋಗ್ಯಭರಿತ ನೆಮ್ಮದಿಯ ಜೀವನ ಎಂದು ದಾಮಸ್‌ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೋ ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆ...

Close