ಕಟೀಲು: ಅಂಗಾಂಗ ದಾನದ ಬಗ್ಗೆ ಜಾಥಾ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಹಾಗೂ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ಅಂಗಾಂಗ ದಾನದ ಬಗ್ಗೆ ಜಾಥಾ ಕಾರ್ಯಕ್ರಮ ಕಟೀಲು ರಥಬೀದಿಯಲ್ಲಿ ನಡೆಯಿತು.
ಇತಿಹಾಸ ಉಪನ್ಯಾಸಕ ಸುರೇಶ್, ಅಂಗಾಂಗ ದಾನದ ಮಹತ್ವದ ಕುರಿತು ಮಾತನಾಡಿ ಮರ ಒಣಗಿದ ಮೇಲೂ ಹಲವಾರು ತರದಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗೆಯೇ ಮನುಷ್ಯನ ಅಂಗಾಂಗಗಳು ಕೂಡಾ ಇತರರಿಗೆ ಅಂಗಾಶ ಜೋಡನೆ ಮೂಲಕ ಉಪಯೋಗಕ್ಕೆ ಬಂದರೆ ಮನುಷ್ಯ ಜೀವನ ಸಾರ್ಥಕ ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಕೃಷ್ಣ, ಡಾ. ಸುನೀತಾ, ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ರಂಜನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03101501

Comments

comments

Comments are closed.

Read previous post:
Kinnigoli-02101510
ಶಿಮಂತೂರು ಶಾರದಾ ಫ್ರೌಡಶಾಲೆ ತೆರೆಮರೆಗೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಶಿಮಂತೂರು ಶಾರದಾ ಫ್ರೌಡಶಾಲೆಯ ಪ್ರಸ್ತುತ ಮುಚ್ಚುಗಡೆಯ ಬೀತಿಯಲ್ಲಿದೆ. ಸಾಕ್ಷಾತ್ ವಿದ್ಯಾ ದೇವತೆಯ ಹೆಸರಿನ ಶಾಲೆಗೆ ಸುವರ್ಣ ಸಂಭ್ರಮದ ವರ್ಷ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು,...

Close