ಮಕ್ಕಳ ಭಾವನೆಗಳಿಗೆ ಹೆತ್ತವರು ಸ್ಪಂದಿಸಲಿ

ಮೂಲ್ಕಿ: ಮಕ್ಕಳ ಭಾವನೆಗಳಿಗೆ ಹೆತ್ತವರು ಸ್ಪಂದಿಸಬೇಕು, ಮಕ್ಕಳ ರಕ್ಷಣೆ ಮತ್ತು ಶಾಲೆಯಿಂದ ಹೊರಗುಳಿಯದಂತೆ ಜಾಗೃತಿ ಮೂಡಿಸುವುದನ್ನು ಪಂಚಾಯಿತಿ ಪ್ರತಿನಿಧಿಗಳು ನಡೆಸಬೇಕು, ಇದರಿಂದ ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಶೋಷಣೆ ಮತ್ತು ಭೇಧ ಭಾವ ಇಲ್ಲದೇ ಮಕ್ಕಳು ಬೆಳೆಯುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯೆ ಅಶಾ ಸುವರ್ಣ ಹೇಳಿದರು.
ಅವರು ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳೂರಿನ ಶಿಕ್ಷಣ ಸಂಪನ್ಮೂಲ ಕೇಂದ್ರ, ಪಡಿ ಸಂಸ್ಥೆ, ಹಳೆಯಂಗಡಿಯ ಯುವತಿ ಮತ್ತು ಮಹಿಳಾ ಮಂಡಳಿ, ಪಂಚಾಯಿತಿ ವ್ಯಾಪ್ತಿಯ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಯವರು ಜಂಟಿಯಾಗಿ ನಡೆಸಿದ ಮಗು ಸ್ನೇಹಿ ಶಾಲೆ ಮತ್ತು ಗ್ರಾಮ ಪಂಚಾಯಿತಿಯ ಸಮುದಾಯ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾ.ಪಂ. ಸದಸ್ಯೆ ಸಾವಿತ್ರಿ ಸುವರ್ಣ, ವಿವಿಧ ಸಂಘಟನೆಯ ಆಶಾಲತಾ, ಸಂಧ್ಯಾ, ನಿರ್ಮಲ, ಜಯರಾಂ, ಭುಜಂಗ ಪೂಜಾರಿ, ವಿಜಯಲಕ್ಷ್ಮೀ, ರಾಮದಾಸ್ ಭಟ್, ಮಹಿಳಾ ಮಂಡಳಿಯ ಜ್ಯೋತಿ, ಪಂಚಾಯಿತಿಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್. ವಸಂತ ಬೆರ್ನಾರ್ಡ್, ಜೀವನ್ ಪ್ರಕಾಶ್, ಅಬ್ದುಲ್ ಖಾದರ್, ವಿನೋದ್ ಕುಮಾರ್ ಮತ್ತಿತರರಿದ್ದರು. ಸಂಘಟಕಿ ನಂದಾ ಪಾಯಸ್ ನಿರೂಪಿಸಿದರು.

Narendra Kerekadu

Mulki-07101505

Comments

comments

Comments are closed.

Read previous post:
Mulki-07101504
ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಸಮಾರಂಭ

ಮೂಲ್ಕಿ: ಉನ್ನತ ಶಿಕ್ಷಣದಿಂದ ಮಾತ್ರ ಯುವ ಸಮಾಜದ ಅಭಿವೃದ್ದೀ ಸಾಧ್ಯ ಮುಂಬೈ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು. ಮೂಲ್ಕಿ ಬಂಟರ ಸಂಘದ ವತಿಯಿಂದ...

Close