ರೋಟರಿ ಗ್ರಹ ಪತ್ರಿಕೆ ಮೂಲಿಕಾ ಬಿಡುಗಡೆ

ಮೂಲ್ಕಿ: ಪೋಲೀಯೋ ಮಹಾ ಮಾರಿಯನ್ನು ಭಾರತ ದೇಶದಿಂದಲೇ ಹೊಡೆದೋಡಿಸಲು ಶಕ್ಯವಾದ ರೋಟರಿ ಸದಸ್ಯರು ಮನುಕುಲದ ಸೇವೆಗೆ ಇನ್ನುಷ್ಟು ಸಜ್ಜುಗೊಳ್ಳ ಬೇಕಾದ ಅವಶ್ಯಕತೆಯಿದೆ. ಸೇವೆ ಮತ್ತು ಸಹಕಾರದ ಮೂಲಕ ರೋಟೇರಿಯನ್ನರು ಜಗತ್ತಿಗೆ ಕೊಡುಗೆಯಾಗ ಬೇಕು ಎಂದು ರೋಟರಿ 3180 ಜಿಲ್ಲಾ ರಾಜ್ಯಪಾಲ ಭರತೇಶ್ ಅಧಿರಾಜ್ ಹೇಳಿದರು.
ಮೂಲ್ಕಿ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವೆ ಹಾಗೂ ಸಹಕಾರ ಸೌಹಾರ್ದತೆ ನಮ್ಮ ಮನೆ ಹಾಗೂ ಪರಿಸರದಿಂದ ಪ್ರಾರಂಭಗೊಂಡು ಬಳಿಕ ಸಮಾಜಕ್ಕೆ ವಿಸ್ತರಿಸಬೇಕು ಕೌಟುಂಬಿಕ ಮೌಲ್ಯಗಳಿಗೆ ರೋಟರಿ ಸದಸ್ಯರು ಹೆಚ್ಚಿನ ಗೌರವ ನೀಡಿದಾಗ ಮಾತ್ರ ಸಾಮಾಜಿಕವಾಗಿ ಉನ್ನತಿಗಳಿಸಲು ಸಾಧ್ಯ ಎಂದರು. ಈಸಂದರ್ಭ ನಿವೃತ್ತ ಅಧ್ಯಾಪಕ ಅಚ್ಚುತ ಆಚಾರ್ಯರನ್ನು ಸನ್ಮಾನಿಸಲಾಯಿತು. ಸಹಾಯಕ ಗವರ್ನರ್ ಸತ್ಯೆಂದ್ರ ಪೈ ಯವರು ಮೂಲ್ಕಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಮೂರ್ತಿ ಸಂಪಾದಕತ್ವದ ಮೂಲ್ಕಿ ರೋಟರಿಯ ಗ್ರಹ ಪತ್ರಿಕೆ ಮೂಲಿಕಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ವಲಯಸೇನಾನಿ ಜೋಯಲ್ ಡಿಸೋಜಾ ಉಪಸ್ಥಿತರಿದ್ದರು. ಮೂಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ ಸಭಾಧ್ಯಕ್ಷತೆ ವಹಿಸಿದ್ದರು.

ಸುನೀತಿ ಭಟ್ ಪ್ರಾರ್ಥನೆಯಿಂದ ಪ್ರಾರಂಭವಾದ ಸಭೆ ಕಾರ್ಯಕ್ರಮದಲ್ಲಿ ಅಶೋಕಕುಮಾರ ಶೆಟ್ಟಿಯವರು ವರದಿ ಮಂಡಿಸಿದರು. ಸೇವಾ ಕಾರ್ಯ: ನರ್ಸಿಂಗ್ ವಿದ್ಯಾರ್ಥಿ ದೀಕ್ಷಾ ಮತ್ತು ತೋಕೂರು ಐ.ಟಿ.ಐ. ವಿದ್ಯಾರ್ಥಿ, ತೇಜಸ್‌ರವರಿಗೆ ವಿದ್ಯಾರ್ಜನೆಗೆ ಆರ್ಥಿಕ ಸಹಾಯ ನೀಡಲಾಯಿತು. ಸಾಮಾಜಿಕ ಸೇವೆಗಾಗಿ ರೋಟರಿ ದತ್ತಿನಿಧಿಗೆ 1 ಸಾವಿರ ಡಾಲರಿನ ಸಹಾಯನಿಧಿಯನ್ನು ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರರಿಗೆ ಹಸ್ತಾಂತರಿಸಲಾಯಿತು. ರೋಟರಿ ಪದಾಧಿಕಾರಿಗಳಾದ ರಾಜಾಪತ್ರಾವೊ, ಎನ್.ಪಿ.ಶೆಟ್ಟಿ, ಜೆ.ಸಿ.ಸಾಲಿಯಾನ್, ಬಾಲಚಂದ್ರ ಸನಿಲ್, ಅಬ್ಬಾಸಾಲಿ, ಅಬ್ದುಲ್ ರಹಿಮಾನ್, ಎಂ. ನಾರಾಯಣ, ರೈಮಂಡ್ ರೆಬೆಲ್ಲೊ, ಜೊವಿನ್ ಪ್ರಕಾಶ್ ಡಿಸೋಜಾ, ಲಿಯಾಕತ್ ಆಲಿ, ಮೊಹಮ್ಮದ್ ಹುಸೇನ್, ಹಸೈನಬ್ಬ, ರವೀಂದ್ರಭಟ್, ಡೊನಾಲ್ಡ್ ಪ್ರಮೋದನ್, ಮೋಹನರಾವ್ ಮುಂತಾದವರು ಈ ಸಂದರ್ಭ ಮತ್ತಿತರರು ಉಪಸ್ಥಿತರಿದ್ದರು.

ರವಿಚಂದ್ರ ಸ್ವಾಗತಿಸಿದರು. ಜಾನ್ ವಿಲ್ಸನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ವೈ. ಎನ್. ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Bhagyavan Sanil

Mulki-07101501

Comments

comments

Comments are closed.

Read previous post:
Kinnigoli-031015013
ಬಲ್ಲಣದಲ್ಲಿ ಬಾವಿಗೆ ಬಿದ್ದ ದನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಲ್ಲಣ ಬಳಿಯ ಮಾರ್ಷಲ್ ಡಿಸೋಜ ಅವರ ಮನೆಯ ಜಾಗದ 30 ಅಡಿ ಆಳದ ಎರಡು ಕಲ್ಲಿನ ಆವರಣದ ಬಾವಿಗೆ ಲೂಕಸ್ ಸಲ್ಡಾನ ಅವರ ಮೇಯಲು...

Close