ಸಸಿಹಿತ್ಲು : ಬಸ್ ಮಾಲೀಕರ ಕಿವಿ ಹಿಂಡಿದ ಗ್ರಾಮಸ್ಥರು

ಮೂಲ್ಕಿ: ಪ್ರಯಾಣಿಕರಿಲ್ಲ ಎಂದು ಬಸ್‌ಗಳನ್ನು ಯಾವುದೇ ಸೂಚನೆಯನ್ನು ನೀಡಿದೆ ಏಕಾಏಕಿ ಟ್ರಿಪ್ ಕಟ್ ಮಾಡುತ್ತಿದ್ದ ಇಲ್ಲಿನ ಸಸಿಹಿತ್ಲು ಸರ್ವಿಸ್ ಬಸ್ಸುಗಳ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅವರ ಕಿವಿಯನ್ನು ಹಿಂಡಿದ ಘಟನೆ ನಿನ್ನೆ ನಡೆದಿದೆ.
ಸಸಿಹಿತ್ಲುವಿನ ಶ್ರೀ ಭಗವತಿ ಕ್ಷೇತ್ರದ ಸಭಾಂಗಣದಲ್ಲಿ ಶ್ರಿ ಕ್ಷೇತ್ರದ ಅಧ್ಯಕ್ಷ ವಾಮನ ಇಡ್ಯಾ ಅಧ್ಯಕ್ಷತೆಯಲ್ಲಿ ನಡೆದ ಬಸ್ ಮಾಲೀಕರ ಹಾಗೂ ಗ್ರಾಮಸ್ಥರ ಸಭೆಯಲ್ಲಿ ಸಸಿಹಿತ್ಲುವಿನಲ್ಲಿ ಸಂಚರಿಸುತ್ತಿರುವ ಒಟ್ಟು 7 ಬಸ್ಸುಗಳು ಏಕಾಏಕಿ ಬೆಳಿಗ್ಗೆ ರಾತ್ರಿ ಸಮಯದಲ್ಲಿ ಹಾಗೂ ಕೆಲವೊಮ್ಮೆ ಹಗಲಿನಲ್ಲೂ ಸಂಚಾರವನ್ನು ಸ್ಥಗಿತಗೊಳಿಸುವುದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಆರ್‌ಟಿಓರವರ ಸಲಹೆಯಂತೆ ಈ ಸಭೆಯನ್ನು ನಡೆಸಲಾಯಿತು.
ಸಸಿಹಿತ್ಲು ಗ್ರಾಮಸ್ಥರು ನಿತ್ಯ ಪ್ರಯಾಣಿಕರ ಆನುಕೂಲತೆಗಾಗಿ ಇರುವ ಖಾಸಗಿ ಸರ್ವಿಸ್ ಬಸ್ಸುಗಳು ನಿಯಮಬದ್ಧರಾಗಿ ತಮ್ಮ ನಿಗದಿತ ಸಮಯದಲ್ಲಿಯೇ ಸಂಚರಿಸಬೇಕು, ಬೆಳಿಗ್ಗೆ ಶಾಲಾ-ಕಾಲೇಜು, ಉದ್ಯೋಗಸ್ಥರಿಗೆ ಹಾಗೂ ನಿತ್ಯ ಪ್ರಯಾಣಿಕರಿಗೆ ಆಗತ್ಯವಿರುವ ಸಮಯದಲ್ಲಿ ಟ್ರಿಪ್‌ನ್ನು ಕಟ್ ಮಾಡುವುದು, ರಾತ್ರಿ ಸಮಯದಲ್ಲಿ ಬಸ್‌ಗಳಿಗೆ ಸಮಯ ಇದ್ದರು ಪ್ರಯಾಣಿಕರಿಲ್ಲ ಎಂದು ಸೂಚನೆ ನೀಡದೆ ನಿಲ್ಲಿಸುವುದು ಸರಿಯಲ್ಲ ಎಂದು ಹೇಳಿದರು.
ಭಾರೀ ಚರ್ಚೆ ನಡೆದು ಕೊನೆಗೆ ಬಸ್ ಪರವಾನಿಗೆಯ ಸಮಯದ ವೇಳಾಪಟ್ಟಿಯನ್ನು ಮುಕ್ಕ ಹಾಗೂ ಸಸಿಹಿತ್ಲುವಿನಲ್ಲಿ ದೇವಸ್ಥಾನದ ವತಿಯಿಂದ ಅಳವಡಿಸುವುದು, ಚಾಲಕ, ನಿರ್ವಾಹಕರ ವರ್ತನೆಯ ಬಗ್ಗೆ ಮಾಲೀಕರು ನಿಗಾವಹಿಸುವುದು, ಗ್ರಾಮಸ್ಥರು ಬಸ್ ಸಂಚಾರಕ್ಕೆ ಸಹಕಾರ ನೀಡಬೇಕು, ರಸ್ತೆಯು ಕಿರಿದಾದುದರಿಂದ ಬಸ್ ಸಂಚರಿಸುವಾಗ ವೇಗಕ್ಕೆ ಕಡಿವಾಣ ಹಾಕಿ ಎಚ್ಚರವಹಿಸಬೇಕು, ಗ್ರಾಮದ ದ್ವಿಚಕ್ರ ವಾಹನ ಸವಾರರು ಸಹ ಈ ಬಗ್ಗೆ ಸಹಕರಿಸಬೇಕು ಎಂದು ಪರಸ್ಪರ ತೀರ್ಮಾನಿಸಲಾಯಿತು.
ದಯಾನಂದ, ಶೋಭೇಂದ್ರ ಸಸಿಹಿತ್ಲು, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಆಶೋಕ್ ಬಂಗೇರ, ಮಾಲತಿ ಡಿ. ಕೋಟ್ಯಾನ್, ಚಿತ್ರಾ ಸುಖೇಶ್, ಅನಿಲ್ ಬಂಗೇರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು. ಬಸ್ ಮಾಲೀಕರಾದ ಸಂತೋಷ್ ಶೆಟ್ಟಿ, ಮೂಸಬ್ಬ, ಅಕ್ಬರಾಲಿ ಭಾಗವಹಿಸಿದ್ದರು.

Narendra Kerekadu

Mulki-07101502

Comments

comments

Comments are closed.

Read previous post:
Mulki-07101501
ರೋಟರಿ ಗ್ರಹ ಪತ್ರಿಕೆ ಮೂಲಿಕಾ ಬಿಡುಗಡೆ

ಮೂಲ್ಕಿ: ಪೋಲೀಯೋ ಮಹಾ ಮಾರಿಯನ್ನು ಭಾರತ ದೇಶದಿಂದಲೇ ಹೊಡೆದೋಡಿಸಲು ಶಕ್ಯವಾದ ರೋಟರಿ ಸದಸ್ಯರು ಮನುಕುಲದ ಸೇವೆಗೆ ಇನ್ನುಷ್ಟು ಸಜ್ಜುಗೊಳ್ಳ ಬೇಕಾದ ಅವಶ್ಯಕತೆಯಿದೆ. ಸೇವೆ ಮತ್ತು ಸಹಕಾರದ ಮೂಲಕ...

Close