ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಸಮಾರಂಭ

ಮೂಲ್ಕಿ: ಉನ್ನತ ಶಿಕ್ಷಣದಿಂದ ಮಾತ್ರ ಯುವ ಸಮಾಜದ ಅಭಿವೃದ್ದೀ ಸಾಧ್ಯ ಮುಂಬೈ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.
ಮೂಲ್ಕಿ ಬಂಟರ ಸಂಘದ ವತಿಯಿಂದ ಮೂಲ್ಕಿ ಬಂಟರ ಭವನದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ,ಪ್ರತಿಭಾ ಪುರಸ್ಕಾರ, ಹೊಲಿಗೆ ಯಂತ್ರ ವಿತರಣೆ, ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ, ಸಾಧಕರ ಸನ್ಮಾನ ಮತ್ತು ಮೂಲ್ಕಿ ಬಂಟರ ಸಂಘ ಹಾಗೂ ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಉನ್ನತ ವಿದ್ಯಾಬ್ಯಾಸ ನಡೆಸಲು ಬಯಸುವ ವಿದ್ಯಾರ್ಥಿಗಳಿಗಾಗಿ ಮುಂಬೈಯಲ್ಲಿ ಉಚಿತ ಹಾಸ್ಟೆಲ್ ವ್ಯವಸ್ಥೆ, ಬಂಟ ಸಮುದಾಯದ ಯುವ ಸಮಾಜಕ್ಕೆ ಉದ್ಯೋಗ ನೀಡಲು ಆರ್ಥಿಕ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆ ಇದೆ ಈ ಬಗ್ಗೆ ಮೂಲ್ಕಿಯ ಬಂಟರ ಸಂಘ ಸಹಕರಿಸಬೇಕು ಎಂದರು.
ಈ ಸಂದರ್ಭ ಪ್ರತಿಷ್ಠಿತ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಸಂಶೋದಕ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ರವರಿಗೆ ಪತ್ನಿ ಸುಶೀಲಾ ರವರ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.
ಸಮಾಜದ ಸಾಧಕರ ಸನ್ಮಾನ: ಪಾಂಡೇಶ್ವರ ಠಾಣೆಯ ನಿರೀಕ್ಷಕರಾದ ದಿನಕರ ಶೆಟ್ಟಿ(ಸರ್ಕಾರಿ ಸೇವೆ), ದೇವೀಶ್ ಶೆಟ್ಟಿ ಐಕಳ (ಕ್ರೀಡೆ), ಶಮೀನಾ ಆಳ್ವಾ (ಸಮಾಜ ಸೇವೆ, ಆರ್ಯಭಟ ಪ್ರಶಸ್ತಿ) ರವರನ್ನು ಹಾಗೂ ಬೆಂಗಳೂರು ಬಂಟರ ಸಂಘದಿಂದ ಬಂಗಾರದ ಪದಕದೊಂದಿಗೆ ಪುರಸ್ಕೃತರಾದ ಸಾವಿತ್ರಿ ಶೆಟ್ಟಿ(ಸಮಾಜ ಶೇವೆ), ಶಿಮಂತೂರು ಭೂತೋತ್ತರ ಜಯರಾಮ ಶೆಟ್ಟಿ (ಪ್ರಗತಿಪರ ಕೃಷಿ) ಇವರನ್ನು ಮೂಲ್ಕಿ ಬಂಟರ ಸಂಘದ ವತಿಯಿಂದ ಸಂಮಾನಿಸಲಾಯಿತು.
ಗ್ರಾಮ ಪಂಚಾಯತಿ ಚುಣಾವಣೆಯ ವಿಜೇತ ಸ್ವ ಸಮಾಜದ 28 ಜನಪ್ರತಿನಿಧಿಗಳನ್ನು ಗೌರವಿಸಲಾಯಿತು.
ಈ ಸಂದರ್ಭ ಬೆಂಗಳೂರು ಬಂಟರ ಸಂಘದ ವತಿಯಿಂದ ಎಂಟು ಹೊಲಿಗೆ ಯಂತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆಯವರು ವಹಿಸಿದ್ದರು.
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ.ನರೇಶ್ ಶೆಟ್ಟಿ,ಕಾರ್ಯದರ್ಶಿ ಎಚ್.ಶ್ರೀಧರ ಹೆಗ್ಡೆ, ಸಮಾಜಸೇವಾ ವಿಭಾಗದ ಚೆಯರ್‌ಮ್ಯಾನ್ ಅಮರನಾಥ ಶೆಟ್ಟಿ, ಮೂಲ್ಕಿ ಸುಂದರರಾಮ ಶೆಟ್ಟಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮನೋಹರ ಶೆಟ್ಟಿ, ಕಾರ್ಯದರ್ಶಿ ಕೆ.ರವಿರಾಜ ಶೆಟ್ಟಿ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಸುಂದರ ಶೆಟ್ಟಿ, ಜತೆ ಕಾರ್ಯದರ್ಶಿ ಮಲ್ಲಿಕಾ ಪೂಂಜಾ, ಮಹಿಳಾ ವಿಭಾಗ ಮುಖ್ಯಸ್ಥರಾದ ಸಾವಿತ್ರಿ ಶೆಟ್ಟಿ, ಯುವ ವಿಭಾಗ ಮುಖ್ಯಸ್ಥ ರಾಜೇಶ್ ಶೆಟ್ಟಿ ಅತಿಥಿಯಾಗಿದ್ದರು,ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ಶೆಟ್ಟಿ, ಗೀತಾ.ಜಿ.ಹೆಗ್ಡೆ, ನವೀನ್ ಶೆಟ್ಟಿ ಎಡ್ಮೆಮಾರ್ ಸಮ್ಮಾನಿತರನ್ನು ಅಭಿನಂದಿಸಿದರು. ರವಿರಾಜ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸಾಯೀನಾಥ ಶೆಟ್ಟಿ ನಿರೂಪಿಸಿದರು.ಪುರುಷೋತ್ತಮ ಶೆಟ್ಟಿ ವಂದಿಸಿದರು.

Mulki-07101504

Comments

comments

Comments are closed.

Read previous post:
Mulki-07101503
ನದಿ ಪೂಜನ ಕಲಶ ಪ್ರತಿಷ್ಠೆ ಪೂಜಾ ಪುನಸ್ಕಾರ

ಮೂಲ್ಕಿ: ಅನಂತ ಚತುರ್ದಶಿ (ನೋಂಪಿ ವೃತ) ಪ್ರಯುಕ್ತ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಮೂಲ್ಕಿ ಶಾಂಭವೀ ನದಿಯಲ್ಲಿ ನದಿ ಪೂಜನ ಕಲಶ ಪ್ರತಿಷ್ಠೆ ಪೂಜಾ ಪುನಸ್ಕಾರಗಳು...

Close