ಕಾರ್ಮಿಕರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು

ಕಿನ್ನಿಗೋಳಿ: ಬಿಸಿಲು ಗಾಳಿ ಮಳೆಗೆ ದುಡಿಯುತ್ತಿರುವ ಕಾರ್ಮಿಕರು ಆರೋಗ್ಯದ ಬಗ್ಗೆ ಗಮನ ಹಾಗೂ ಸಮಾಜದಲ್ಲಿ ಸಿಗುವ ಹಲವಾರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ್ ಹೇಳಿದರು.
ಕಿನ್ನಿಗೋಳಿಯ ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕನ್ಸೆಟ್ಟಾ ಆಸ್ಪತ್ರೆಯ ಜಂಟೀ ಆಶ್ರಯದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸೌಲಭ್ಯ ಹಾಗೂ ನೊಂದಾವಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕನ್ಸೆಟ್ಟಾ ಆಸ್ಪತ್ರೆಯ ಮೇಲ್ವಿಚಾರಕಿ ಭಗಿನಿ ಪ್ಲೋಸ್ಸಿ ಮಿನೇಜಸ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಜೀವನದಾರ ಸೇವಾ ಸಂಸ್ಥೆಯ ದೇವಿಕಾ ಬಿ., ಉಪಸ್ಥಿತರಿದ್ದರು.
ಸಂಜೀವಿನಿ ಸಂಸ್ಥೆಯ ಸಂಚಾಲಕಿ ಭಗಿನಿ ಹೋಪ್ ಸ್ವಾಗತಿಸಿದರು. ಸಂಜೀವಿನಿ ಸಂಸ್ಥೆಯ ಅಧಿಕಾರಿ ಲಲಿತಾ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08101505

Comments

comments

Comments are closed.

Read previous post:
Kinnigoli-08101504
ಅಂಗಾಂಗ ದಾನ ಮತ್ತು ಸರಕಳ್ಳತನ ಬೀದಿ ನಾಟಕ

ಕಿನ್ನಿಗೋಳಿ: ಅಂಗಾಂಗ ದಾನದ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು. ಐಕಳ ಪೊಂಪೈ...

Close