ಕ್ರೀಡಾಂಗಣದಲ್ಲಿ ರಾಜಕೀಯ ಬೇಡ

ಕಿನ್ನಿಗೋಳಿ: ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಯುವಜನರ ಹಿತ ಕಾಪಾಡಬೇಕಾದ ಕ್ರೀಡಾ ಸಚಿವರೇ ಕ್ರೀಡಾಂಗಣದ ವಿಷಯದಲ್ಲಿ ಅಡ್ಡಿ ಪಡಿಸುವ ಮೂಲಕ ಸಚಿವ ಕೆ.ಅಭಯಚಂದ್ರ ಜೈನ್ ಸರಕಾರದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿದ್ದಾರೆ ಎಂದು ದ.ಕ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ಹರಿಪಾದೆ ಸ್ಪೋರ್ಟ್ಸ್ ಕ್ಲಬ್‌ನ ಯುವಕರು ಗಾಂಧಿ ಜಯಂತಿ ಪ್ರಯುಕ್ತ ಕಬಡ್ಡಿ ಪಂದ್ಯಾಟಕ್ಕಾಗಿ ರಸ್ತೆ ಬದಿಯ ಸರ್ಕಾರಿ ಜಮೀನನ್ನು ಪಂಚಾಯಿತಿಯ ನಿರಪೇಕ್ಷಣಾ ಪತ್ರದೊಂದಿಗೆ ಜಮೀನು ಸಮತಟ್ಟುಗೊಳಿಸಲು ಪ್ರಾರಂಭಿಸಿದಾಗ ಕ್ರೀಡಾಂಗಣಕ್ಕೆ ಕಂದಾಯ ಇಲಾಖೆಯ ಮೂಲಕ ಸಚಿವರು ತಡೆ ಒಡ್ಡಿದ್ದನ್ನು ವಿರೋಧಿಸಿ ಪಂಜದ ಹರಿಪಾದ ಜಾರಂದಾಯ ಯುವಕ ಮಂಡಲದ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕೆಲವರು ಇದೇ ಜಾಗದಲ್ಲಿ ಮಣ್ಣನ್ನು ತೆಗೆದಾಗ ಅಲ್ಲದೆ ಕೆಲವರು ತ್ಯಾಜ್ಯಗಳನ್ನು ಇಲ್ಲೇ ಸ್ಥಳದಲ್ಲಿ ಬಿಸಾಡಿದಾಗ ಇಲ್ಲಿನ ಸ್ಥಾಪಿತ ಹಿತಾಸಕ್ತಿಗಳು ಮರು ಮಾತನಾಡದೆ ಈಗ ಸದ್ಬಳಕೆಯ ಕಬಡ್ಡಿ ಕೋರ್ಟಿಗೆ ತಕರಾರು ಎತ್ತಿ ಸಚಿವರನ್ನು ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡುವುದು ಎಷ್ಟು ಸರಿ? ಜಾಗದ ಸತ್ಯಾಸತ್ಯತೆಯನ್ನು ಅರಿತು ಅಭಯಚಂದ್ರ ಜೈನ್ ಅವರು ಸಾಮಾಜಿಕ ನ್ಯಾಯ ನೀಡಬೇಕೆ ಹೊರತು ವಿನಾ ಕಾರಣ ಅಧಿಕಾರ ಬಳಸಿ ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳದೆ ನಿಜವಾದ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮುತುವರ್ಜಿ ವಹಿಸಲಿ. ಮುಂದಿನ ದಿನಗಳಲ್ಲಿ ಅಕ್ರಮಗಳನ್ನು ಮಾಹಿತಿ ಹಕ್ಕಿನ ಮೂಲಕ ಪಡೆದು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಸತ್ಯಜಿತ್ ಸುರತ್ಕಲ್ ಮಾತನಾಡಿ ಅದೆಷ್ಟೊ ಅಕ್ರಮ ಕಟ್ಟಡಗಳು ಸರಕಾರಿ ಜಾಗದಲ್ಲಿ ತಲೆ ಎತ್ತಿ ನಿಂತಿದ್ದು ಹಾಗೂ ಎಕರೆಗಟ್ಟಲೆ ಸರಕಾರದ ಜಾಗಗಳನ್ನೇ ವಶಪಡಿಸಿಕೊಂಡ ಭೂಮಾಫಿಯಗಳ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಸಚಿವ ಅಭಯಚಂದ್ರ ಜೈನ್ ಅವರು ಇಂತಹ ಕ್ಷುಲ್ಲಕ ವಿಷಯ ಮತ್ತು ಸ್ಥಳೀಯ ಸ್ಥಾಪಿತ ಹಿತಾಸಕ್ತಿಗಳ ಸುಳ್ಳು ಮತ್ತು ದ್ವೇಷದ ರಾಜಕಾರಣಕ್ಕೆ ಕಿವಿಗೊಟ್ಟು ಹೀಗೆ ಕ್ರಮ ಕೈಗೊಳ್ಳುವುದು ಸಮಂಜಸವಲ್ಲ ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದರು,
ಜಿಲ್ಲಾ ಪಂಚಾಯಿತಿ ಸದಸ್ಸ್ಯ ಈಶ್ವರ್ ಕಟೀಲ್ ಮಾತನಾಡಿ ಈ ರೀತಿಯ ತಪ್ಪು ನಡೆಯ ತೀರ್ಮಾನಗಳನ್ನು ತೆಗೆದುಕೊಂಡರೆ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೂ ಸಿದ್ದರಾಗಲಿದ್ದೇವೆ. ಸಚಿವರು ಸಮಾಜದಲ್ಲಿ ಭೇದಭಾವ ಮಾಡದೆ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದರು
ಈ ಸಂದರ್ಭ ಮುಖಂಡರಾದ ಸತೀಶ್ ಭಟ್ ಕೊಳುವೈಲು, ಕಸ್ತೂರಿ ಪಂಜ, ಈಶ್ವರ ಕಟೀಲು, ಕೆ.ಭುವನಾಭಿರಾಮ ಉಡುಪ, ಸನತ್‌ಕುಮಾರ್ ಹಳೆಯಂಗಡಿ, ವಿನೋದ್ ಕುಮಾರ್, ಸುನಿಲ್ ಆಳ್ವಾ ಮೂಲ್ಕಿ, ವಿನೋದ್‌ಸಾಲ್ಯಾನ್ ಬೆಳ್ಳಾಯರು, ದಿನೇಶ್ ಹರಿಪಾದೆ, ನಾಗೇಶ್ ಬೊಳ್ಳೂರು, ಸುಧಾಕರ್ ಶೆಟ್ಟಿ, ಜಯರಾಮ ಆಚಾರ್ಯ, ಸಚಿನ್ ಶೆಟ್ಟಿ ಸುರಗಿರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-08101502

Comments

comments

Comments are closed.

Read previous post:
Kinnigoli-08101501
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿ. ಪ್ರಾ. ಶಾಲೆ ಸ್ವಚ್ಚತೆ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಆಶ್ರಯದಲ್ಲಿ ಶಾಲಾ ಪರಿಸರದಲ್ಲಿ ಸ್ವಚ್ಚತಾ ಆಂದೋಲನ ನಡೆಯಿತು. ಈ ಸಂದರ್ಭ ಶಾಲಾ...

Close