ಪೈಪ್ ಕಾಂಪೋಸ್ಟ್‌ನಿಂದ ಗೊಬ್ಬರ ಹಾಗೂ ಸ್ವಚ್ಚತೆ

ಕಿನ್ನಿಗೋಳಿ : ಮನೆಗಳಲ್ಲಿ ಸಂಗ್ರಹವಾಗುವ ಕಸಗಳ ಪೈಕಿ ಹಸಿ ಕಸ, ಮಣ್ಣಲ್ಲಿ ಕರಗುವ ಕಸಗಳು ಹಾಗೂ ಪ್ಲಾಸ್ಟಿಕ್‌ಗಳನ್ನು ಪ್ರತ್ಯೇಕಿಸಿ ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವನ್ನು ಪ್ರತೀ ಮನೆಯಲ್ಲೂ ಅನುಷ್ಠಾನಗೊಳಿಸಿದಾಗ ಗ್ರಾಮಪಂಚಾಯಿತಿ ವ್ಯಾಪ್ತಿ ಮಟ್ಟದಲ್ಲೂ ಸ್ವಚ್ಚತೆ ಕಾಪಾಡಿಕೊಳ್ಳಬಹುದು. ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಕಟೀಲು ಗ್ರಾಮ ಪಂಚಾಯಿತಿಗಳ ಜಂಟೀ ಆಶ್ರಯದಲ್ಲಿ ಮೆನ್ನಬೆಟ್ಟು ಪಂಚಾಯಿತಿಯ 126 ಹಾಗೂ ಕಟೀಲು ಪಂಚಾಯಿತಿಯ 95 ಮನೆಗಳಿಗೆ ಪೈಪ್ ಕಾಂಪೋಸ್ಟ್ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಎಸ್ ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಶೆಟ್ಟಿ, ಮೆನ್ನಬೆಟ್ಟು ಪಂಚಾಯಿತಿ ಪಿಡಿಒ ರಮ್ಯಾ ಕಾರ್ಯದರ್ಶಿ ಪ್ರಕಾಶ್ ಬಿ., ಕಟೀಲು ಪಂಚಾಯಿತಿ ಪಿಡಿಒ ನಾಗೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-10101502

Comments

comments

Comments are closed.

Read previous post:
Kinnigoli-10101501
ಬಿಜೆಪಿ ಪ್ರಶಿಕ್ಷಣ ವರ್ಗ ಶಿಬಿರ

ಕಿನ್ನಿಗೋಳಿ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದರೆ ಮಂಡಲದ ಪ್ರಶಿಕ್ಷಣ ವರ್ಗದ ಶಿಬಿರವನ್ನು ನಿಡ್ಡೋಡಿ ಜ್ಞಾನ ರತ್ನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷ ಸತೀಶ್...

Close