ಧರ್ಮದ ಪ್ರಚಾರದಿಂದಲೂ ಸಮಾಜ ಸೇವೆ

ಕಿನ್ನಿಗೋಳಿ: ಧರ್ಮದ ಪ್ರಚಾರದಿಂದಲೂ ಸಮಾಜವನ್ನು ಸಮಾಜಿಕ ಬದ್ದತೆಯಿಂದ ಸೇವಾ ಮನೋಭಾವನೆ ಬೆಳೆಸಬಹುದು, ಭಕ್ತರ ನಿರಂತರ ಆರಾಧನೆಗಳಿಂದ ಮಾತ್ರ ಧಾರ್ಮಿಕ ಕ್ಷೇತ್ರಗಳು ಬೆಳಗಲು ಸಾಧ್ಯ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿ ಯುಗಪುರುಷದ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಶನಿವಾರ ವಿಶೇಷ ಭೇಟಿ ನೀಡಿ ಧಾರ್ಮಿಕತೆಯ ಬಗ್ಗೆ ಮಾತನಾಡಿದರು.
ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ಭಗವಂತನಲ್ಲಿ ದೂರಿಕೊಳ್ಳುವ ನಾವು ಸುಖದ ದಿನದಲ್ಲಿ ಪೂಜಿಸುವ ಮನಸ್ಸು ಮಾಡುವುದಿಲ್ಲ. ಕಷ್ಟ-ಸುಖ ಎರಡು ಸಹ ದೇವರ ಧ್ಯಾನ ಆದಲ್ಲಿ ಮಾತ್ರ ಜೀವನದ ಉದ್ದಕ್ಕೂ ನೆಮ್ಮದಿಯಿಂದ ಬಾಳಬಹುದು ಇದೇ ಧರ್ಮದ ಪ್ರಚಾರ ಎಂದು ಹೇಳಿದರು.
ಕನ್ನಡದ ಸುಧೀರ್ಘ ಅವಧಿಯಲ್ಲಿ ಪ್ರಕಟವಾಗುತ್ತಿರುವ ಏಕೈಕ “ಯುಗಪುರುಷ” ಮಾಸಪತ್ರಿಕೆಯು ಇಂದಿನ ಆಧುನಿಕತೆಯ ಮಾಧ್ಯಮಗಳ ಪೈಪೋಟಿಯ ನಡುವೆಯು ಅಚ್ಚುಕಟ್ಟಾಗಿ ಪ್ರಸಾರ ಆಗುತ್ತಿರುವುದನ್ನು ಉಲ್ಲೇಖಿಸಿದ ಸ್ವಾಮೀಜಿ “ಯುಗಪುರುಷ” ಸಂಸ್ಥೆಯನ್ನು ಅಭಿನಂದಿಸಿದರು.
ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಅಂಗಡಿಮಾರು ಕೃಷ್ಣ ಭಟ್, ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಪೃಥ್ವಿರಾಜ್ ಆಚಾರ್ಯ, ದಿನೇಶ್ ಆಚಾರ್ಯ, ಜಯ ಮುದ್ದು ಶೆಟ್ಟಿ ಕೆಂಚನಕೆರೆ, ಧನಂಜಯ ಶೆಟ್ಟಿಗಾರ್, ಶರತ್ ಶೆಟ್ಟಿ, ಸುಧಾಕರ ಸಾಲ್ಯಾನ್, ರಾಮಣ್ಣ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿಯ ಗಣೇಶೋತ್ಸವದ ವಸಂತ ಮಂಟಪದಿಂದ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಯುಗಪುರಷಕ್ಕೆ ಕರೆತರಲಾಯಿತು.

Kinnigoli-10101503

Comments

comments

Comments are closed.

Read previous post:
Kinnigoli-10101502
ಪೈಪ್ ಕಾಂಪೋಸ್ಟ್‌ನಿಂದ ಗೊಬ್ಬರ ಹಾಗೂ ಸ್ವಚ್ಚತೆ

ಕಿನ್ನಿಗೋಳಿ : ಮನೆಗಳಲ್ಲಿ ಸಂಗ್ರಹವಾಗುವ ಕಸಗಳ ಪೈಕಿ ಹಸಿ ಕಸ, ಮಣ್ಣಲ್ಲಿ ಕರಗುವ ಕಸಗಳು ಹಾಗೂ ಪ್ಲಾಸ್ಟಿಕ್‌ಗಳನ್ನು ಪ್ರತ್ಯೇಕಿಸಿ ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವನ್ನು ಪ್ರತೀ ಮನೆಯಲ್ಲೂ ಅನುಷ್ಠಾನಗೊಳಿಸಿದಾಗ...

Close