ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಬಿರ 

ಕಿನ್ನಿಗೋಳಿ : ಯೋಗ ನಿತ್ಯದ ಬದುಕಿಗೆ ಅತ್ಯಂತ ಅವಶ್ಯಕವಾದ ಚಟುವಟಿಕೆಯಾಗಿದ್ದು ಪೂರ್ಣ ಪ್ರಮಾಣದಲ್ಲಿ ಅನುಸರಿಸುವುದರಿಂದ ಉತ್ತಮ ಆರೋಗ್ಯ, ಏಕಾಗ್ರತೆ ಮನೋಸ್ಥೈರ್ಯ, ಮನೋಬಲವನ್ನು ಹೆಚ್ಚಿಸಿಕೊಳ್ಳಬಹುದು. ಎಂದು ನೋಟರಿ ವಕೀಲ ಬಿಪಿನ್‌ಪ್ರಸಾದ್ ಹೇಳಿದರು.
ಆಳ್ವಾಸ್ ಪ್ರಕೃತಿ ಚಿಕಿತ್ಸೆಮತ್ತು ಯೋಗ ಮಹಾವಿದ್ಯಾಲಯ ಮೂಡಬಿದಿರೆ, ಸರಕಾರಿ ಆರ್ಯುವೇದ ಆಸ್ಪತ್ರೆ ಹಾಗೂ ಕೊಲ್ಲೂರು ಹಳೆವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಆರ್ಯುವೇದ ಆಸ್ಪತ್ರೆ ಕೊಲ್ಲೂರಿನಲ್ಲಿ ಒಂದು ವಾರದ ಕಾಲ ನಡೆಯಲಿರುವ ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಲ್ಲೂರು ಸರಕಾರಿ ಆರ್ಯುವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶೋಭಾರಾಣಿ ಶಿಬಿರ ಉದ್ಘಾಟಿಸಿದರು.
ಮೂಡಬಿದ್ರೆ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಪ್ರಿನ್ಸಿಪಾಲ್ ಡಾ. ವನಿತಾ ಎಸ್. ಶೆಟ್ಟಿ, ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ನಾಯ್ಕ್ ಉಪಸ್ಥಿತರಿದ್ದರು.
ಡಾ. ದೀಪಕ್ ಸ್ವಾಗತಿಸಿ, ಡಾ. ಹರ್ಷಿತಾ ರೈ ಕಾರ್ಯಕ್ರಮ ನಿರೂಪಿಸಿದರು.

Kinnigoli-15101505

Comments

comments

Comments are closed.

Read previous post:
Kinnigoli-15101504
ಪ್ರಾಣಾಯಾಮ ಯೋಗ ತರಬೇತಿ ಶಿಬಿರ

ಕಿನ್ನಿಗೋಳಿ: ಸದಾ ಉದ್ವೇಗ, ಒತ್ತಡ ಹಾಗೂ ಐಷಾರಾಮಿಯ ವ್ಯಾಮೋಹಕ್ಕೆ ಬಲಿಯಾಗಿರುವ ಆಧುನಿಕ ಜೀವನ ಶೈಲಿಯ ಮನುಷ್ಯ ಪ್ರಾಣಾಯಾಮ ಹಾಗೂ ಯೋಗ ಸಾಧನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಕ್ಷಿಕೆರೆ...

Close