ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆ ಅಮೃತ ಮಹೋತ್ಸವ 

ಕಿನ್ನಿಗೋಳಿ: ಮಕ್ಕಳು ವಿದ್ಯಾರ್ಜನೆಯೊಂದಿಗೆ ತಮ್ಮ ಪ್ರತಿಭೆಗಳ ಬಗ್ಗೆ ಗಮನ ನೀಡಿ ಭವಿಷ್ಯದಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣ ಕಟ್ಟುವ ಕನಸು ಕಂಡು ಅದನ್ನು ಸಾಕಾರಮಾಡಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು.
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಶಾಲಾ ಅಮೃತ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಪ್ರೌಢಶಾಲೆಯ ಮೊದಲ ಬ್ಯಾಚಿನ ವಿದ್ಯಾರ್ಥಿನಿಯಾಗಿದ್ದ ಭಗಿನಿ ಮೆಡಿಲ್ಲಾ ಸಂಸ್ಥೆಯ ಸಂಸ್ಥಾಪಕ ರೆ. ಫಾ. ರೇಮಂಡ್ ಮಸ್ಕರೇನ್ಹಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮೌಲ್ಯಾಧಾರಿತ ಶಿಕ್ಷಣದಿಂದ ಮಕ್ಕಳು ಸೃಜನಶೀಲರಾಗಬಲ್ಲರು. ಕಿನಿಗೋಳಿ ಪರಿಸರದಲ್ಲಿ ಮೊದಲ ಹೆಣ್ಣುಮಕ್ಕಳ ಪ್ರೌಡಶಾಲೆಯಾಗಿದ್ದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಮುನ್ನಡಿ ಬರೆದ ಈ ಸಂಸ್ಥೆಯು ಉಜ್ವಲವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.

ಮಂಗಳೂರು ಬೆಥನಿ ಪ್ರಾಂತ್ಯಾಧಿಕಾರಣಿ ಭಗಿನಿ ಮಾರಿಯೇಟ್ ಬಿ. ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣವೆಂದರೆ ಮೌಲ್ಯಗಳ ಮೇಲೆ ಜೀವನ ಕಟ್ಟುವುದು ಕೇವಲ ಅಡುಗೆ ಕೋಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಇಂದು ಜ್ಞಾನಾರ್ಜನೆಯಿಂದ ಸಮಾಜದ ಎಲ್ಲಾಸ್ಥರಗಳಲ್ಲಿಯೂ ಮಿಂಚುತ್ತಿದ್ದಾರೆ ಎಂದರು.

ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಭಗಿನಿ ಡಿವೀನಾ ಬಿ. ಎಸ್. ಸಂಸ್ಥೆಯ ಸಂಸ್ಥಾಪಕರಿಗೆ ನುಡಿ ನಮನ ಸಲ್ಲಿಸಿದರು.
ಸಂಸ್ಥೆಯ ಹಳೇವಿದ್ಯಾರ್ಥಿಗಳು 75 ಹಣತೆಗಳನ್ನು ಬೆಳಗಿಸುವ ಮೂಲಕ ಅಮೃತ ಮಹೋತ್ಸವಕ್ಕೆ ವಿಶೇಷ ಕಳೆ ತಂದರು.
ಈ ಸಂಧರ್ಭ ಕಿನ್ನಿಗೋಳಿ ಮೇರಿವೆಲ್ ಕಾನ್ವೆಂಟ್ ಸುಪೀರಿಯರ್ ಭಗಿನಿ ವಿತಾಲಿಸ್ ಬಿ.ಎಸ್. ಮಂಗಳೂರು ಮಲ್ಲಿಕಟ್ಟೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ಪ್ರಭಂದಕಿ ಜೆಸಿಂತಾ ಮಥಾಯಸ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಪದ್ಮಾಕ್ಷಿ ಆರ್. ಭಟ್, ಕುಲಶೇಖರ ಕೆ.ಇ.ಬಿ. ಸೆಕ್ಷನ್ ಆಫೀಸರ್ ಗಣೇಶ್ ಕುಂದರ್, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ದೇವಾಡಿಗ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ.ಎಸ್. ಸ್ವಾಗತಿಸಿದರು. ಮರ್ಸಿನ್ ಕ್ರಾಸ್ತ ವಂದಿಸಿದರು. ಹಿಲರಿ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.
Kinnigoli-15101506
Kinnigoli-15101507 Kinnigoli-15101508 Kinnigoli-15101509 Kinnigoli-15101510

Comments

comments

Comments are closed.

Read previous post:
Kinnigoli-15101505
ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಬಿರ 

ಕಿನ್ನಿಗೋಳಿ : ಯೋಗ ನಿತ್ಯದ ಬದುಕಿಗೆ ಅತ್ಯಂತ ಅವಶ್ಯಕವಾದ ಚಟುವಟಿಕೆಯಾಗಿದ್ದು ಪೂರ್ಣ ಪ್ರಮಾಣದಲ್ಲಿ ಅನುಸರಿಸುವುದರಿಂದ ಉತ್ತಮ ಆರೋಗ್ಯ, ಏಕಾಗ್ರತೆ ಮನೋಸ್ಥೈರ್ಯ, ಮನೋಬಲವನ್ನು ಹೆಚ್ಚಿಸಿಕೊಳ್ಳಬಹುದು. ಎಂದು ನೋಟರಿ ವಕೀಲ ಬಿಪಿನ್‌ಪ್ರಸಾದ್...

Close