ಪುನರೂರು ಎನ್‌ಎಸ್‌ಎಸ್ ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಎನ್‌ಎಸ್‌ಎಸ್ ನಂತಹ ಶಿಬಿರಗಳಲ್ಲಿ ಹಳ್ಳಿಯ ಬದುಕು, ಕೃಷಿ ಕಾರ್ಯಗಳು, ಸಹ ಬಾಳ್ವೆ, ವ್ಯಕ್ತಿತ್ವ ವಿಕಸನ, ಮನೋಬಲ, ಸ್ವ-ಆರೋಗ್ಯದ ಬಗ್ಗೆ ಅರಿವು ಮೂಡುತ್ತದೆ ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳೂರು ಶಾರದಾ ಕಾಲೇಜು ಎನ್. ಎಸ್. ಎಸ್. ವಿಶೇಷ ವಾರ್ಷಿಕ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಶಾರದಾ ಕಾಲೇಜು ಪ್ರಿನ್ಸಿಪಾಲ್ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ಉದ್ಯಮಿ ಪಟೇಲ್ ವಾಸುದೇವರಾವ್, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಲ್ಕಿ ವಲಯ ಪತ್ರಕರ್ತ ಸಂಘದ ಅಧ್ಯಕ್ಷ ನರೇಂದ್ರ ಕೆರೆಕಾಡು, ಶಿಬಿರಾಧಿಕಾರಿ ಸೂರಜ್ ಎಂ. ದೇವಾಡಿಗ ಉಪಸ್ಥಿತರಿದ್ದರು.
ಸಹಶಿಬಿರಾಧಿಕಾರಿ ದೀಕ್ಷಿತಾ ಆರ್ ಸ್ವಾಗತಿಸಿದರು, ವರ್ಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15101511

Comments

comments

Comments are closed.

Read previous post:
Kinnigoli-15101506
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆ ಅಮೃತ ಮಹೋತ್ಸವ 

ಕಿನ್ನಿಗೋಳಿ: ಮಕ್ಕಳು ವಿದ್ಯಾರ್ಜನೆಯೊಂದಿಗೆ ತಮ್ಮ ಪ್ರತಿಭೆಗಳ ಬಗ್ಗೆ ಗಮನ ನೀಡಿ ಭವಿಷ್ಯದಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣ ಕಟ್ಟುವ ಕನಸು ಕಂಡು ಅದನ್ನು ಸಾಕಾರಮಾಡಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು...

Close