ಸಂತೋಷ್ ಕುಮಾರ್ ಹೆಗ್ಡೆ ಪುನರಾಯ್ಕೆ

ಮುಲ್ಕಿ : ಪ್ರತಿಷ್ಠಿತ ಮುಲ್ಕಿ ಬಂಟರ ಸಂಘದ ಮುಂದಿನ ಎರಡು ವರ್ಷಗಳ ಅವಧಿಗೆ ಸಂತೋಷ್ ಹೆಗ್ಡೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಸಂತೋಷ್ ಕುಮಾರ್ ಹೆಗ್ಡೆ ಅವರು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ಎರಡು ಅವಧಿಗಳಲ್ಲಿ ಮುಲ್ಕಿ ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾನುವಾರ ಮುಲ್ಕಿ ಬಂಟರ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಂತೋಷ್ ಕುಮಾರ್ ಹೆಗ್ಡೆ ಸಹಿತ ಕಳೆದ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ರವಿರಾಜ ಶೆಟ್ಟಿ, ಜೊತೆ ಕಾರ್ಯದರ್ಶಿ ಮಲ್ಲಿಕಾ ಜಯರಾಮ ಪೂಂಜಾ, ಕೋಶಾಧಿಕಾರಿ ಸುಂದರ ಶೆಟ್ಟಿ ಆಯ್ಕೆಯಾಗಿದ್ದಾರೆ.

Kinnigoli-15101503

Comments

comments

Comments are closed.

Read previous post:
Kinnigoli-15101502
ಪಂಜ- ಕೊಯಿಕುಡೆ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಆಯ್ಕೆ

ಕಿನ್ನಿಗೋಳಿ: ಪಂಜ- ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ (ರಿ) ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪಂಜ ವಾಸುದೇವ ಭಟ್, ಉಪಾಧ್ಯಕ್ಷರಾಗಿ...

Close