ದಾನ ಮತ್ತು ಸರಕಳ್ಳತನ : ಬೀದಿ ನಾಟಕ

ಕಿನ್ನಿಗೋಳಿ: ಐ.ಸಿ.ವೈ.ಮ್ ಪಕ್ಷಿಕೆರೆ, ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಐಕಳ ಪೊಂಪೈ ಕಾಲೇಜು ವಿದ್ಯಾರ್ಥಿಗಳ ಆಶ್ರಯದಲ್ಲಿ ಅಂಗಾಂಗ ದಾನ ಹಾಗೂ ಸರಕಳ್ಳತನದ ಜಾಗೃತಿ ಮೂಡಿಸುವ ಬೀದಿ ನಾಟಕ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪೇಟೆಯಲ್ಲಿ ನಡೆಯಿತು. ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂಲಿಯೋಡಿಸೋಜಾ, ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ, ಮುಲ್ಕಿ ಠಾಣಾ ಹೆಡ್ ಕಾನ್‌ಸ್ಟೇಬಲ್ ಹರಿಯಪ್ಪ , ಬಸವರಾಜ್, ಸುಧೀರ್ ಅಂಗಾಂಗ ದಾನ ಮತ್ತು ಸರಕಳ್ಳತನ ತಡೆಗಟ್ಟುವುದು ಮತ್ತು ಮುಂಜ್ರಾಗತೆ ಬಗ್ಗೆ ಉಪನ್ಯಾಸ ನೀಡಿದರು. ಪಕ್ಷಿಕೆರೆ ಸಹಾಯಕ ಧರ್ಮಗುರು ಫಾ. ಪ್ಯಾಟ್ರಿಕ್ ಸಿಕ್ವೇರಾ, ಪೊಂಪೈ ಕಾಲೇಜು ಎನ್. ಎಸ್. ಎಸ್ ಯೋಜನಾಧಿಕಾರಿ ಸವಿತಾ ಕುಮಾರಿ, ಸಹಾಯಕ ಯೋಜನಾಧಿಕಾರಿ ವೀಣಾ ಸುವಾರಿಸ್, ರೆಡ್‌ಕ್ರಾಸ್ ಸಂಸ್ಥೆ ಯೋಜನಾಧಿಕಾರಿ ಯೋಗಿಂದ್ರ ಬಿ, ಪಕ್ಷಿಕೆರೆ ಐಸಿವೈಮ್ ಅಧ್ಯಕ್ಷ ಕೆಬಿತ್ ರೊಡ್ರಿಗಸ್, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಪಕ್ಷಿಕರೆ, ಕಾರ್ಯದರ್ಶಿ ವಿಜೇತ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-15101501

Comments

comments

Comments are closed.

Read previous post:
Kinnigoli-10101503
ಧರ್ಮದ ಪ್ರಚಾರದಿಂದಲೂ ಸಮಾಜ ಸೇವೆ

ಕಿನ್ನಿಗೋಳಿ: ಧರ್ಮದ ಪ್ರಚಾರದಿಂದಲೂ ಸಮಾಜವನ್ನು ಸಮಾಜಿಕ ಬದ್ದತೆಯಿಂದ ಸೇವಾ ಮನೋಭಾವನೆ ಬೆಳೆಸಬಹುದು, ಭಕ್ತರ ನಿರಂತರ ಆರಾಧನೆಗಳಿಂದ ಮಾತ್ರ ಧಾರ್ಮಿಕ ಕ್ಷೇತ್ರಗಳು ಬೆಳಗಲು ಸಾಧ್ಯ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ...

Close