ಪ್ರಾಣಾಯಾಮ ಯೋಗ ತರಬೇತಿ ಶಿಬಿರ

ಕಿನ್ನಿಗೋಳಿ: ಸದಾ ಉದ್ವೇಗ, ಒತ್ತಡ ಹಾಗೂ ಐಷಾರಾಮಿಯ ವ್ಯಾಮೋಹಕ್ಕೆ ಬಲಿಯಾಗಿರುವ ಆಧುನಿಕ ಜೀವನ ಶೈಲಿಯ ಮನುಷ್ಯ ಪ್ರಾಣಾಯಾಮ ಹಾಗೂ ಯೋಗ ಸಾಧನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಕ್ಷಿಕೆರೆ ಸಂತಜೂದರ ಚರ್ಚ್ ಸಹಾಯಕ ಧರ್ಮಗುರು ಫಾ. ಪ್ಯಾಟ್ರಿಕ್ ಸಿಕ್ವೇರಾ ಹೇಳಿದರು.
ಪಕ್ಷಿಕರೆ ಸಂತ ಜೂದರ ಚರ್ಚ್‌ನ ವಾರ್ಷಿಕ ಮಹೋತ್ಸವದ ಅಂಗವಾಗಿ ಸೋಮವಾರ ಚರ್ಚ್ ಮಿನಿಹಾಲ್‌ನಲ್ಲಿ ನಡೆದ ಒಂದು ವಾರದ ಸಾಮೂಹಿಕ ಪ್ರಾಣಾಯಾಮ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕೆಂಚನಕೆರೆ ಯೋಗಾಶ್ರಮದ ಸಂಚಾಲಕ ಯೋಗಗುರು ಜಯ ಮುದ್ದು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಸಲ್ಡಾನ ಪಕ್ಷಿಕೆರೆ, ನೋಯಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

Kinnigoli-15101504

Comments

comments

Comments are closed.

Read previous post:
Kinnigoli-15101503
ಸಂತೋಷ್ ಕುಮಾರ್ ಹೆಗ್ಡೆ ಪುನರಾಯ್ಕೆ

ಮುಲ್ಕಿ : ಪ್ರತಿಷ್ಠಿತ ಮುಲ್ಕಿ ಬಂಟರ ಸಂಘದ ಮುಂದಿನ ಎರಡು ವರ್ಷಗಳ ಅವಧಿಗೆ ಸಂತೋಷ್ ಹೆಗ್ಡೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಸಂತೋಷ್ ಕುಮಾರ್ ಹೆಗ್ಡೆ ಅವರು ಎಳತ್ತೂರು...

Close