ರೋಟರಿಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿ

ಕಿನ್ನಿಗೋಳಿ: ಕಾರ್ಕಳ ರೋಟರಿ ಕ್ಲಬ್ ಆಶ್ರಯದಲ್ಲಿ ಕಾರ್ಕಳ ಪರುವಾಜೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ರೋಟರಿ ಜಿಲ್ಲೆ 3180 ರ ರೋಟರಿ ವಲಯ 3 ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಪ್ರಹಸನ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಮಕ್ಕಳ ವೈಯಕ್ತಿಕ ನೃತ್ಯ ವಿಭಾಗದಲ್ಲಿ ವಿರಾಜ್ ತ್ಯಾಗರಾಜ್ ಆಚಾರ್ಯ ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಹಿಳೆಯರ ಗುಂಪು ನೃತ್ಯ ವಿಭಾಗದಲ್ಲಿ ಕಿನ್ನಿಗೋಳಿ ರೋಟರಿಯ ಮಹಿಳಾ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಜಿಲ್ಲಾ ಮಟ್ಟದ ಸ್ಪರ್ಧೆ ನವೆಂಬರ್ 29 ರಂದು ಬಂಟ್ವಾಳದಲ್ಲಿ ನಡೆಯಲಿದೆ.
ಭಾನುವಾರ ಕಾರ್ಕಳದಲ್ಲಿ ರೋಟರಿ ವಲಯ ೩ರ ಅಸಿಸ್ಟೆಂಟ್ ಗವರ್ನರ್ ಸತ್ಯೇಂದ್ರ ಪೈ ಮತ್ತು ರೋಟರಿ ಗಣ್ಯರಿಂದ ಕಿನ್ನಿಗೋಳಿ ರೋಟರಿ ಆಧ್ಯಕ್ಷ ಎಂ.ಬಾಲಕೃಷ್ಣ ಶೆಟ್ಟಿ ಹಾಗೂ ರೋಟರಿ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.

Kinnigoli-16101520

Comments

comments

Comments are closed.

Read previous post:
Kinnigoli-16101518
ವಿಭಿನ್ನ ಶೈಲಿಯ ಸಂದೇಶ?????

ಕಿನ್ನಿಗೋಳಿ: ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 30 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯಲ್ಲಿ ಕಟೀಲು ಗೆಳೆಯರ ಬಳಗ ವೇಷದ ಮೂಲಕ ವಿಭಿನ್ನ ಶೈಲಿಯ ಪ್ರತಿಭಟನೆ...

Close