ಪುನರೂರು ಪೈಪ್ ಕಾಂಪೋಷ್ಟು

ಕಿನ್ನಿಗೋಳಿ: ಮನೆಯಲ್ಲಿ ಉಳಿಕೆಯಾದ ಅಹಾರ ಪದಾರ್ಥಗಳು ತರಕಾರಿ ಮೀನು ಮಾಂಸ ತ್ಯಾಜ್ಯಗಳು ಚಾಹುಡಿ, ಒಲೆ ಭೂಧಿಯನ್ನು ಪೈಪ್ ಕಾಂಪೋಷ್ಟು ತಂತ್ರಜ್ಞಾನದಿಂದ ಉತ್ತಮ ಗೊಬ್ಬರವಾಗಿ ಪರಿವರ್ತಿಸಬಹುದು ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಆಶಾ ಸುವರ್ಣ ಹೇಳಿದರು. ಕಿನ್ನಿಗೋಳಿ ಗ್ರಾಮ ಪಂಚಾಯತಿಯ ಪುನರೂರು ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನದಲ್ಲಿ ಪೈಪ್ ಕಾಂಪೋಷ್ಟು ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಮನೆ ತ್ಯಾಜ್ಯವನ್ನು ಹೊರಹಾಕಿ ಪರಿಸರದ ನೈರ್ಮಲ್ಯ ಕೆಡಿಸುವುದರಿಂದ ಆರೋಗ್ಯ ಸಮಸ್ಯೆಯುಂಟಾಗುತ್ತದೆ. ಪೈಪ್ ಕಾಂಪೋಷ್ಟು ಮೂಲಕ ಪರಿಸರ ನೈರ್ಮಲ್ಯದೊಂದಿಗೆ ತರಕಾರಿ ಹಾಗೂ ಹೂ ಗಿಡಗಳಿಗೆ ಸಾಕಷ್ಟು ಉತ್ತಮ ಗುಣಮಟ್ಟದ ಗೊಬ್ಬರ ಲಭಿಸುವುದರಿಂದ ಆರ್ಥಿಕ ಉನ್ನತಿ ಗಳಿಸಿಕೊಳ್ಳಬಹುದು ಎಂದರು.
ಕಿನ್ನಿಗೋಳಿ ಪಂಚಾಯತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ,ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಸದಸ್ಯರಾದ ರವೀಂದ್ರ,ಶಾಲಿನಿ,ಸೇವೆಂತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-20101512

Comments

comments

Comments are closed.

Read previous post:
Mulki-20101510
ತ್ಯಾಜ್ಯ ನಿರ್ವಹಣೆ ಹಾಗೂ ಅಂತರ್ಜಲ ವೃದ್ಧಿ

ಮೂಲ್ಕಿ: ಕುಡಿಯುವ ನೀರು ಹಾಗೂ ಗ್ರಹತ್ಯಾಜ್ಯ ನಿರ್ವಹಣೆ ಪಂಚಾಯತಿಗಳಿಗೆ ಬೃಹತ್ ಸವಾಲಾಗಿ ಪರಿಣಮಿಸುತ್ತಿದ್ದು ಗ್ರಾಮಸ್ಥರು ಸಹಕರಿಸಿದರೆ ತ್ಯಾಜ್ಯ ನಿರ್ವಹಣೆ ಹಾಗೂ ಅಂತರ್ಜಲ ವೃದ್ಧಿ ಸುಲಭ ಸಾಧ್ಯ ಎಣದು...

Close