ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

ಮುಕ್ಕ: ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ದೈನಂದಿನ ಚಟುವಟಿಕೆಯಲ್ಲಿ ಪ್ರಾಮುಖ್ಯವಾಗಿದೆ. ಸೋಲು – ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ಮನೋಭಾವವನ್ನು ಕ್ರೀಡೆಯು ನೀಡುತ್ತದೆ. ಹಾಗೂ ನಿರಂತರ ಅಭ್ಯಾಸದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಟ್ರೋಫಿಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ   ಗೌತಮ್ ಶೆಟ್ಟಿಯವರು ಅಭಿಪ್ರಾಯ ಪಟ್ಟರು.

ಮುಕ್ಕ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ರೋಟರಾಕ್ಟ್ ಕ್ಲಬ್ ನ ಆತಿಥ್ಯದಲ್ಲಿ ನಡೆದ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪ್ಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಿನ್ಸ್ ಪಾಲ್  ಡಾ. ಶ್ರೀಪ್ರಕಾಶ್ ಬಿ., ಉಪ ಪ್ರಿನ್ಸ್ ಪಾಲ್ ಡಾ.ರಾಮಕೃಷ್ಣ ಹೆಗ್ದೆ , ಸುರತ್ಕಲ್ ರೋಟರಿ ಕ್ಲಬ್  ಅಧ್ಯಕ್ಷ ರೊ. ರಾಜಮೋಹನ್ ರಾವ್ , ಸಾಂದರ್ಭಿಕವಾಗಿ ಶುಭ ಹಾರೈಸಿದರು.

ಉಡುಪಿಯ ನಿವೃತ್ತ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ ಬಿ.ಕೃಷ್ಣಮೂರ್ತಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರೋಟರಾಕ್ಟ್ ಕ್ಲಬ್ ಸಲಹೆಗಾರ ಪ್ರಾಧ್ಯಾಪಕ ಮೋಹನ್ ಕುಮಾರ್ ,ಸುರತ್ಕಲ್ ರೋಟರಿ ಕ್ಲಬ್ ಸದಸ್ಯರು, ಕಾಲೇಜಿನ ದೈಹಿಕ ಶಿಕ್ಷಕ ರಾಮಕೃಷ್ಣ ಉಪಸ್ಥಿತರಿದ್ದರು. ರಶ್ಮಿತ ಸ್ವಾಗತಿಸಿ, ಕಾರ್ಯದರ್ಶಿ ಪೂರ್ಣಿಮಾ ಭಟ್ ವಂದಿಸಿದರು. ವಿನಿಟ ಕಾರ್ಯಕ್ರಮ ನಿರೂಪಿಸಿದರೆ, ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಚಂದ್ರು ಎ. ಕಾರ್ಯಕ್ರಮ ನಿರ್ವಹಿಸಿದರು.

ಪುರುಷರ ವಿಭಾಗದಲ್ಲಿ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಬರ‍್ನಾರ್ಡ್ ಹಾಗೂ ಪ್ರತೀಕ್ ಶೆಟ್ಟಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು, ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನ ಚಿರಾಗ್ ರಾವ್ ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಮಹಿಳಾ ವಿಭಾಗದಲ್ಲಿ ರಚನಾ ಪ್ರಥಮ ಸ್ಥಾನಿಯಾಗಿ ಮೂಡಿಬಂದರು.

Nishanth Shetty

Mukka-20101501 Mukka-20101502 Mukka-20101503 Mukka-20101504 Mukka-20101505 Mukka-20101506 Mukka-20101507

Comments

comments

Comments are closed.

Read previous post:
Mulki-20101513
ಸೇವಾ ಸಂಸ್ಥೆಗೆ ಮಾಧ್ಯಮ ಪ್ರೋತ್ಸಾಹ ಅಗತ್ಯ

ಮೂಲ್ಕಿ: ಸಮಾಜ ಸೇವೆಯಲ್ಲಿರುವ ಪ್ರತಿಯೊಂದು ಸೇವಾ ಸಂಸ್ಥೆಗಳಿಗೆ ಮಾಧ್ಯಮಗಳು ಪ್ರೋತ್ಸಾಹ ನೀಡಿದಲ್ಲಿ ಅವರು ನಡೆಸುವ ಕಾರ್ಯಚಟುವಟಿಕೆಗಳು ಬೇರೆಂದು ಸಂಸ್ಥೆಗೆ ಪ್ರೇರಣೆ ಆಗುವಲ್ಲಿ ಸಹಕಾರಿ ಆಗುತ್ತದೆ ಇದು ಸಮೂಹ ಸ್ವಾವಂಬನೆಗೆ...

Close