ಇ.ಬಿ.ಲೋಬೋ ನಿವೃತ್ತಿ ಸನ್ಮಾನ

ಮೂಲ್ಕಿ: ಸರ್ವರಲ್ಲಿ ಆತ್ಮೀಯರಾಗಿ ಪ್ರಾಮಾಣಿಕವಾಗಿ ವೃತ್ತಿ ಜೀವನ ನಿರ್ವಹಿಸಿ ಸಂಸ್ಥೆಯ ಬೆಳವಣಿಯ ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ವಾಘ್ಮಿ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎನ್.ವಿದ್ಯಾದರ ಶೆಟ್ಟಿ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಸ್ಪೋಟ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ಹಾಗೂ ಎಲ್‌ಐಸಿ ಎಒಐ ಮೂಲ್ಕಿ ಶಾಖೆಯ ಸಂಯೋಜನೆಯಲ್ಲಿ ನಿಗಮದ ಮೂಲ್ಕಿ ಶಾಖೆಯ ಹಿರಿಯ ಶಾಖಾಧಿಕಾರಿ ಇ.ಬಿ.ಲೋಬೋರವರು ನಿವೃತ್ತಿಗೊಳ್ಳುವ ಸಂದರ್ಭ ಅವರ ಸಾಧನೆಯನ್ನು ಗೌರವಿಸಿ ಮೂಲ್ಕಿ ಶ್ರೀರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಲೊಬೋರವರನ್ನು ಅಭಿನಂಧಿಸಿ ಮಾತನಾಡಿದರು.
ಹೊಸ ಪ್ರವೃತ್ತಿ ಪಡೆಯಲು ಪೂರಕವಾಗಿ ವೃತ್ತಿ ಜೀವನದಲ್ಲಿ ನಿಶ್ಚಿತವಾದ ನಿವೃತ್ತಿಯಿಂದ ಜೀವನೋತ್ಸಾಹ ಇಮ್ಮಡಿಗೊಳಿಸಿ ಜ್ಞಾನ ಪ್ರವರ್ದನೆಗೆ ತಮ್ಮನ್ನು ತೊಡಿಸಿಕೊಂಡು ಯುವ ಸಮಾಜದ ಕಣ್ಮಣಿಯಾಗಿ ಬೆಳಗಬೇಕು.ಲೋಬೋರವರು ವೃತ್ತಿ ಜೀವನದಲ್ಲಿ ನೀಡಿದ ಉತ್ತಮ ಸೇವೆ ಹಾಗೂ ಭಾಂದವ್ಯ ಪ್ರವರ್ದನೆ ಮುಂದಿನ ಯುವ ಸಮಾಜಕ್ಕೆ ಮಾರ್ಗದರ್ಶಿ ಎಂದರು.ಈ ಸಂದರ್ಭ ಇ.ಬಿ.ಲೋಬೋ ರವರನ್ನು ಪತ್ನಿ ಎಲಿಜಬೆತ್ ಲೋಬೋರವರೊಂದಿಗೆ ಸನ್ಮಾನಿಸಲಾಯಿತು.
ಜೀವ ವಿಮಾ ನಿಗಮದ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ವಿಶ್ವನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್, ಮಾರ್ಕೆಟಿಂಗ್ ಮ್ಯಾನೇಜರ್ ರಾಜೇಶ್.ವಿ.ಮುಧೋಳ್, ಸೇಲ್ಸ್ ಮ್ಯಾನೇಜರ್ ಯು.ನಾರಾಯಣ ಗೌಡ ಮೂಲ್ಕಿ ಶಾಖೆಯ ಹಿರಿಯ ಶಾಖಾಧಿಕಾರಿ ಬಿ.ವಿಶ್ವನಾಥ್ ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಲಿಯೋ ತಾವ್ರೋ ಸ್ವಾಗತಿಸಿದರು. ಮಮತಾ ಗಿರೀಶ್ ನಿರೂಪಿಸಿದರು.ರಮೇಶ್ ಕುಮಾರ್ ವಂದಿಸಿದರು.

Bhagyavan SanilMulki-20101512

Comments

comments

Comments are closed.

Read previous post:
Kinnigoli-20101512
ಪುನರೂರು ಪೈಪ್ ಕಾಂಪೋಷ್ಟು

ಕಿನ್ನಿಗೋಳಿ: ಮನೆಯಲ್ಲಿ ಉಳಿಕೆಯಾದ ಅಹಾರ ಪದಾರ್ಥಗಳು ತರಕಾರಿ ಮೀನು ಮಾಂಸ ತ್ಯಾಜ್ಯಗಳು ಚಾಹುಡಿ, ಒಲೆ ಭೂಧಿಯನ್ನು ಪೈಪ್ ಕಾಂಪೋಷ್ಟು ತಂತ್ರಜ್ಞಾನದಿಂದ ಉತ್ತಮ ಗೊಬ್ಬರವಾಗಿ ಪರಿವರ್ತಿಸಬಹುದು ಎಂದು ಜಿಲ್ಲಾ...

Close