ಬೀಳ್ಕೋಡುಗೆ ಶಿಕ್ಷಕಿ ಐರಿನ್ ಶಶಿಕಲಾ

ಮೂಲ್ಕಿ: ಯುವ ಸಮಾಜಕ್ಕೆ ಮಾರ್ಗದರ್ಶಕರಾಗಿ ಶಿಕ್ಷಣ ನೀಡಿದ ಗುರುಗಳು ಪರಮಶ್ರೇಷ್ಠರಾಗಿದ್ದು ಅವರ ಬಗ್ಗೆ ಸದಾ ಕ್ರತಜ್ಞತಾ ಪೂರ್ವಕ ಗೌರವ ಭಾವನೆ ಇರಬೇಕು ಎಂದು ಸಿ.ಎಸ್.ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂಥ್ಯದ ಬಿಷಪ್ ರೈಟ್ ರೆ. ಮೋಹನ್ ಮನೋರಾಜ್ ಹೇಳಿದರು.
ಮೂಲ್ಕಿ ಕಾರ್ನಾಡು ಸಿ.ಎಸ್.ಐ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಯು.ಬಿ.ಎಂ.ಸಿ ಹಿರಿಯ ಪ್ರಾಥಮಿಕ ಶಾಲೆ ಸಂಯೋಜನೆಯಲ್ಲಿ ಶಾಲೆ  ಮುಖ್ಯ ಶಿಕ್ಷಕಿ ಐರಿನ್ ಶಶಿಕಲಾ ರವರ ನಿವ್ರತ್ತಿ ಪ್ರಯುಕ್ತ ಶಾಲೆಯ ಸಭಾಂಗಣದಲ್ಲಿ ನಡೆದ ಬೀಳ್ಕೋಡುಗೆ ಸಮಾರಂಭದ ಅಭ್ಯಾಗತರಾಗಿ ಮಾತನಾಡಿದರು.
ಶಿಕ್ಷಕರು ಅದ್ಯಯನಶೀಲರಾಗಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಹಿತ ಮೌಲ್ಯಾಧಾರಿತ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದಲ್ಲಿ ಪ್ರಜ್ಞಾವಂತ ವಿದ್ಯಾರ್ಥಿ ಸಮುದಾಯದ ಬೆಳವಣಿಗೆಯಾಗಿ ಪ್ರದೇಶದ ಉನ್ನತಿಯ ಜೊತೆಗೆ ಶಿಕ್ಷಕರೂ ಸದಾ ಸ್ಮರಣೀಯರಾಗುತ್ತಾರೆ ಎಂದರು.
ಈ ಸಂದರ್ಭ ನಿವೃತ್ತಿ ಹೊಂದಿರುವ ಮುಖ್ಯ ಶಿಕ್ಷಕಿ ಐರಿನ್ ಶಶಿಕಲಾ ರವರನ್ನು ಸಂಶ್ಥೆಯ ಹಾಗೂ ವಿದ್ಯಾರ್ಥಿಗಳ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸಿ.ಎಸ್.ಐ ಚರ್ಚಿನ ಸಭಾ ಪಾಲಕ ರೆ.ಸಂತೋಷ್ ಕುಮಾರ್ ವಹಿಸಿದ್ದರು.
ಎರಿಯಾ ಚೆಯರ್‌ಮೇನ್ ವಿನ್‌ಫ್ರೆಡ್ ಅಮ್ಮನ್ನ.ಕಾಸ್‌ಡೆಸ್ ಕಾರ್ಯದರ್ಶಿ ಆಲ್ಫ್ರೆಡ್ ಜೋಶಿ,ಸಿ.ಎಸ್.ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂಥ್ಯದ ಕಾರ್ಯದರ್ಶಿ ಐಸಾಕ್ ವಿಜಯಶೇಖರ್ ,ಖಜಾಂಜಿ ಉದಯರಾಜ್ ಕೌಂಡ್ಸ್, ಸಿ.ಎಸ್.ಐ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರೊ.ಸ್ಯಾಮ್ ಮಾಬೆನ್ ಅತಿಥಿಗಳಾಗಿದ್ದರು.
ಪ್ರೊ.ಸ್ಯಾಮ್ ಮಾಬೆನ್ ಸ್ವಾಗತಿಸಿದರು,ಐರಿನ್ ಕ್ರಿಸ್ತಬೆಲ್ ನಿರೂಪಿಸಿದರು, ಗ್ಲೇಡಿಸ್ ಸುಕುಮಾರಿ ವಂದಿಸಿದರು.

Bhagyavan Sanil

Mulki-20101509

Comments

comments

Comments are closed.

Read previous post:
ದಸರಾ ದೀಪಾವಳಿ ವಿಶೇಷಾಂಕ ಬಿಡುಗಡೆ

ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷ ಮಾಸ ಪತ್ರಿಕೆ ದಸರಾ ದೀಪಾವಳಿ ವಿಶೇಷಾಂಕವನ್ನು ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸನ್ನಿಧಿಯಲ್ಲಿ ಕ್ಷೇತ್ರದ ಮೊಕ್ತೇಸರ ವಾಸುದೇವ ಆಸ್ರಣ್ಣ ಬಿಡುಗಡೆಗೊಳಿಸಿದರು. ಈ...

Close