ತ್ಯಾಜ್ಯ ನಿರ್ವಹಣೆ ಹಾಗೂ ಅಂತರ್ಜಲ ವೃದ್ಧಿ

ಮೂಲ್ಕಿ: ಕುಡಿಯುವ ನೀರು ಹಾಗೂ ಗ್ರಹತ್ಯಾಜ್ಯ ನಿರ್ವಹಣೆ ಪಂಚಾಯತಿಗಳಿಗೆ ಬೃಹತ್ ಸವಾಲಾಗಿ ಪರಿಣಮಿಸುತ್ತಿದ್ದು ಗ್ರಾಮಸ್ಥರು ಸಹಕರಿಸಿದರೆ ತ್ಯಾಜ್ಯ ನಿರ್ವಹಣೆ ಹಾಗೂ ಅಂತರ್ಜಲ ವೃದ್ಧಿ ಸುಲಭ ಸಾಧ್ಯ ಎಣದು ಪಡುಪಣಂಬೂರು ಗ್ರಾಮ ಪಂ ಸದಸ್ಯ ವಿನೋದ್ ಸಾಲ್ಯಾನ್ ಹೇಳಿದರು.
ಕೆರೆಕಾಡು ಸರ್ಕಾರಿ ಹಿರಿಯ ಪ್ರಾಮಿಕ ಶಾಲೆಯಲ್ಲಿ ಪಡುಪಣಂಬೂರು ಪಂಚಾಯತಿ ವತಿಯಿಂದ ನಡೆದ ಪೈಪ್ ಕಾಂಪೋಸ್ಟಿಂಗ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಸ್ಥರು ತ್ಯಾಜ್ಯ ನಿರ್ವಹಣೆ ಅಂಜರ್ತಜ ಮರು ಪೂರಣ ಕಾರ್ಯಕ್ರಮವನ್ನು ಸರಿಯಾಗಿ ನಡೆಸಿದಲ್ಲಿ ಸಮಸ್ಯೆಗಳಿಂದ ಪರಿಹಾರ ಸಾಧ್ಯ ಎಂದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಪಂಚಾಯತಿ ಪಿಡಿಯೋ ಅನಿತಾ ಕ್ಯಾಥರೀನ್ ಮಾತನಾಡಿ, ಗ್ರಾಮಸ್ಥರು ಕೊಳೆಯದ ವಸ್ತುಗಳು,ಪ್ಲಾಷ್ಟಿಕ್ ಮುಂತಾದ ತ್ಯಾಜ್ಯವನ್ನು ಬೇರೆಯಾಗಿ ಸಂಗ್ರಹಿಸಿ ಇಟ್ಟು ಕೊಳೆಯುವ ಗೃಹತ್ಯಾಜ್ಯಗಳನ್ನು ಕಾಂಪೋಷ್ಟು ಪೈಪಿನ ಒಳಗೆ ಹಾಕಿ ಅದಕ್ಕೆ ಎರಡು ದಿನಗಳ ಕಾಲ ಹುಳಿ ಬರಿಸಿದ ಗಂಜಿ ನೀರು ಅಥವಾ ಬೆಲ್ಲ ಸೇರಿಸಿದ ಸೆಗಣಿ ನೀರು ಹಾಕಿ ಹಾಗೇ ಮುಂದುವರಿಸಿದಲ್ಲಿ ಮೂರು ತಿಂಗಳ ಬಳಿಕ ಗೊಬ್ಬರ ಲಭ್ಯವಾಗುವುದು ಈ ಬಗ್ಗೆ ಸೂಕ್ತ ಮಾಹಿತಿಯನ್ನು ಪಂಚಾಯತಿಯಲ್ಲಿ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಪಂಚಾಯತಿ ಅಧ್ಯಕ್ಷ ಮೋಹನ್ ತೋಕೂರು ವಹಿಸಿ. ಸ್ವಚ್ಚ ಭಾರತ ಪರಿಕಲ್ಪನೆಯಡಿ ನಡೆಸಲಾಗುವ ಕಾರ್ಯಕ್ರಮದಲ್ಲಿ ಗ್ರಾಮೀಣ ಜನರ ಹಿತವಿರುವ ಕಾರಣ ಎಲ್ಲರೂ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಆಶಾ ಸುವರ್ಣ, ತಾಪಂ ಸದಸ್ಯ ವನಿತಾ ಉದಯ ಅಮೀನ್, ಪಂ. ಉಪಾಧ್ಯಕ್ಷೆ ಸುರೇಖಾ ಕೆ, ಶಾಲಾ ಮುಖ್ಯೋಪಾದ್ಯಾಯಿನಿ ಭುವನೇಶ್ವರಿ, ಗ್ರಾಮ ಪಂ ಸದಸ್ಯರು ಉಪಸ್ಥಿತರಿದ್ದರು
ಶಿಕ್ಷಕ ನವೀನ್ ಡಿಕೋಸ್ತಾ ನಿರೂಪಿಸಿದರು.ಪಂ ಸಿಬ್ಬಂದಿ ಶರ್ಮಿಳಾ ವಂದಿಸಿದರು.

Bhagyavan Sanil

Mulki-20101510 Mulki-20101511

Comments

comments

Comments are closed.

Read previous post:
Mulki-20101509
ಬೀಳ್ಕೋಡುಗೆ ಶಿಕ್ಷಕಿ ಐರಿನ್ ಶಶಿಕಲಾ

ಮೂಲ್ಕಿ: ಯುವ ಸಮಾಜಕ್ಕೆ ಮಾರ್ಗದರ್ಶಕರಾಗಿ ಶಿಕ್ಷಣ ನೀಡಿದ ಗುರುಗಳು ಪರಮಶ್ರೇಷ್ಠರಾಗಿದ್ದು ಅವರ ಬಗ್ಗೆ ಸದಾ ಕ್ರತಜ್ಞತಾ ಪೂರ್ವಕ ಗೌರವ ಭಾವನೆ ಇರಬೇಕು ಎಂದು ಸಿ.ಎಸ್.ಐ ಕರ್ನಾಟಕ ದಕ್ಷಿಣ...

Close