ಸೇವಾ ಸಂಸ್ಥೆಗೆ ಮಾಧ್ಯಮ ಪ್ರೋತ್ಸಾಹ ಅಗತ್ಯ

ಮೂಲ್ಕಿ: ಸಮಾಜ ಸೇವೆಯಲ್ಲಿರುವ ಪ್ರತಿಯೊಂದು ಸೇವಾ ಸಂಸ್ಥೆಗಳಿಗೆ ಮಾಧ್ಯಮಗಳು ಪ್ರೋತ್ಸಾಹ ನೀಡಿದಲ್ಲಿ ಅವರು ನಡೆಸುವ ಕಾರ್ಯಚಟುವಟಿಕೆಗಳು ಬೇರೆಂದು ಸಂಸ್ಥೆಗೆ ಪ್ರೇರಣೆ ಆಗುವಲ್ಲಿ ಸಹಕಾರಿ ಆಗುತ್ತದೆ ಇದು ಸಮೂಹ ಸ್ವಾವಂಬನೆಗೆ ಪೂರಕ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲೆ ಎಂ. ಕವಿತಾ ಎಸ್. ಶಾಸ್ತ್ರಿ ಹೇಳಿದರು.
ಅವರು ಹಳೆಯಂಗಡಿಯ ಕಮಲ ಸದನದಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್‌ನಿಂದ ನಿರ್ಮಿಸಿದ, ಮೂಲ್ಕಿ ಪ್ರೆಸ್ ಕ್ಲಬ್ ನಿರ್ವಹಣೆಯ “ಸುದ್ದಿ ಪೆಟ್ಟಿಗೆ”ಯನ್ನು ಉದ್ಘಾಟಿಸಿ ಮಾತನಾಡಿದರು.
ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಬಂಗೇರ ಅಧ್ಯಕ್ಷತೆಯನ್ನು ವಹಿಸಿದ್ದರು.
ಹಳೆಯಂಗಡಿ ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಚಂದ್ರಶೇಖರ ನಾನಿಲ್, ಪ್ರಾಂತೀಯ ಅಧ್ಯಕ್ಷ ಯಾದವ ದೇವಾಡಿಗ, ವಲಯಾಧ್ಯಕ್ಷ ದೇವಪ್ರಸಾದ ಪುನರೂರು, ಮಾಜಿ ರಾಜ್ಯಪಾಲ ಡಾ. ಸಂತೋಷ್ ಕುಮಾರ್ ಶಾಸ್ತ್ರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷ ಪದ್ಮಾವತಿ ಶೆಟ್ಟಿ, ಉದ್ಯಮಿ ಶಶೀಂದ್ರ ಎಂ. ಸಾಲ್ಯಾನ್, ಲಯನ್ಸ್ ಕ್ಲಬ್‌ನ ಎಚ್.ವಸಂತ ಬೆರ್ನಾರ್ಡ್, ಭಾಸ್ಕರ ಸಾಲ್ಯಾನ್, ಮೋಹನ್ ಸುವರ್ಣ, ಯಶೋಧರ ಸಾಲ್ಯಾನ್, ಶರತ್ ಪಿ, ವಾಸು ನಾಯ್ಕ್, ಬ್ರಿಜೇಶ್ ಕುಮಾರ್, ಪ್ರಜ್ವಲ್ ಪೂಜಾರಿ, ಅಬ್ದುಲ್ ಖಾದರ್ ಇನ್ನಿತರರು ಉಪಸ್ಥಿತರಿದ್ದರು.
ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು, ಪ್ರಸ್ತಾವನೆಗೈದರು, ಯಾದವ ದೇವಾಡಿಗ ನಿರೂಪಿಸಿದರು.

Mulki-20101513

Comments

comments

Comments are closed.

Read previous post:
Mulki-20101512
ಇ.ಬಿ.ಲೋಬೋ ನಿವೃತ್ತಿ ಸನ್ಮಾನ

ಮೂಲ್ಕಿ: ಸರ್ವರಲ್ಲಿ ಆತ್ಮೀಯರಾಗಿ ಪ್ರಾಮಾಣಿಕವಾಗಿ ವೃತ್ತಿ ಜೀವನ ನಿರ್ವಹಿಸಿ ಸಂಸ್ಥೆಯ ಬೆಳವಣಿಯ ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ವಾಘ್ಮಿ ಜೀವ ವಿಮಾ...

Close