ಮಂಗಳೂರು ಡಯಾಸೀಸ್ ಮಟ್ಟದ ಕ್ರೀಡಾಕೂಟ

ಮೂಲ್ಕಿ: ಕ್ರೀಡಾ ಕೂಟಗಳು ಯುವ ಸಮಾಜಕ್ಕೆ ಆರೋಗ್ಯ ನೀಡುವ ಜೊತೆಗೆ ಪರಸ್ಪರ ಸಂಘಟಿತರಾಗಿ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದು ಆದಾನಿ ಪವರ್ಸ್ ಪ್ರೋಜೆಕ್ಟ್ ಕೋರ್ಪರೇಟ್ ಅಫಾರ್ಸ್ ನಿರ್ದೇಶಕ ಕಿಶೋರ್ ಆಳ್ವಾ ರವರು ಹೇಳಿದರು.
ಇಂಡಿಯನ್ ಕಥೋಲಿಕ್ ಯೂತ್ ಮೂವ್ಮೆಂಟ್ ಮತ್ತು ಯಂಗ್ ಕ್ರಿಶ್ಚನ್ ಸ್ಟೂಡೆಂಟ್ಸ್ ಮೂಲ್ಕಿ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ಡಯಾಸೀಸ್ ಮಟ್ಟದ ಅಂತರ್ ಸಭಾ ಪುರುಷರಿಗಾಗಿ ವಾಲಿಬಾಲ್ ಹಾಗೂ ಮಹಿಳೆಯರಿಗಾಗಿ ತ್ರೋ ಬಾಲ್ ಪಂದ್ಯಾಕೂಟವನ್ನು ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ವಠಾರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಪಥದಲ್ಲಿರುವ ಮೂಲ್ಕಿ ಗ್ರಾಮೀಣ ಪ್ರದೇಶವಾಗಿದ್ದು ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಹೊಂದಿರುವ ಪ್ರದೇಶವಾಗಿದ್ದು ಇಲ್ಲಿನ ಪ್ರದೇಶದ ಸಾರ್ವಜನಿಕರಿಗಾಗಿ ವಿದ್ಯೆ ಆರೋಗ್ಯ ಹಾಗೂ ಮೂಲಭೂತ ವ್ಯವಸ್ಥೆಯ ವಿಚಾರದಲ್ಲಿ ಅದಾನಿ ಸಂಸ್ಥೆ ಸಹಕಾರ ನೀಡಲಿದೆ. ಮೂಲ್ಕಿ ಚರ್ಚಿನ ಯುವ ಸಂಘಟನೆಗಳು ಮಂಗಳೂರು ಡಯಾಸಿಸ್ ಮಟ್ಟದ ಕ್ರೀಡಾ ಕೂಟವನ್ನು ಉತ್ತಮವಾಗಿ ಆಯೋಜಿಸಿರುವುದು ಸ್ತುತ್ಯರ್ಹ ಎಂದರು.
ಸಭಾದ್ಯಕ್ಷತೆಯನ್ನು ಮೂಲ್ಕಿ ಚರ್ಚು ಧರ್ಮಗುರು ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ವಹಿಸಿದ್ದರು. ಆದಾನಿ ಪವರ‍್ಸ್ ಪ್ರೋಜೆಕ್ಟ್ ಚೀಪ್ ಎಕ್ಸಿಕ್ಯೂಟಿವ್ ಆಫಿಸರ್ ರಾಮಕೃಷ್ಣ ನಾವಡ, ಕಾರ್ನಾಡು ಶ್ರೀ ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ, ಮೂಲ್ಕಿ ನಗರ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಮುಖ್ಯಾಧಿಕಾರಿ ವಾಣಿ ಆಳ್ವಾ, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಕಾರ್ಯದರ್ಶಿ ಸೆಲಿನ್ ರಾಡ್ರಿಗಸ್, ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಜೋಬಿ ಜೋಸೆಪ್, ಸಮಾಜ ಸೇವಕ ಡಾ.ಸುರೇಶ್ ಅರಾಹ್ನ, ಉಪಸ್ಥಿತರಿದ್ದರು.
ವಿನೋಲಾ ರೆಬೆಲ್ಲೊ ಸ್ವಾಗತಿಸಿದರು, ಪ್ರದೀಪ್ ಫೆರಾವೊ ನಿರೂಪಿಸಿದರು, ಎಲ್ರೋಯ್ ಕ್ರಾಸ್ತಾ ವಂದಿಸಿದರು.

Mulki-21101505

Comments

comments

Comments are closed.

Read previous post:
Mulki-21101504
ಸಾಮೂಹಿಕ ಶ್ರೀ ಶನೀಶ್ವರ ಪೂಜೆ

ಮೂಲ್ಕಿ: ಮೂಲ್ಕಿ ಬಳಿಯ ಕಾರ್ನಾಡಿನ ಶ್ರೀ ಧರ್ಮಸ್ಥಾನ ಯುವಕ ವೃಂದ ಹಾಗೂ ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಧರ್ಮಸ್ಥಾನದ ಧರ್ಮ ಸಂಗಮ ವೇದಿಕೆಯಲ್ಲಿ 11ನೇ ವರ್ಷದ ಸಾಮೂಹಿಕ...

Close