ಎನ್‌ಎಸ್‌ಎಸ್ ಶಿಬಿರ

ಮೂಲ್ಕಿ: ಪಡುಪಣಂಬೂರು ಉಮಾಹೇಶ್ವರೀ ದೇವಸ್ಥಾನದಲ್ಲಿ ಹಳೆಯಂಗಡಿ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು ಮಾತನಾಡಿದರು.

ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್‌ಎಸ್‌ಎಸ್ ಪೂರಕ : ನರೇಂದ್ರ ಕೆರೆಕಾಡು
ಮೂಲ್ಕಿ:
“ನನಗಲ್ಲ ನಿನಗೆ”ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಪರಿಪೂರ್ಣ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗಿ ಎನ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿದೆ. ಸ್ವಯಂ ಸೇವಕನಾಗಿ ವಿದ್ಯಾರ್ಥಿಯು ರಸ್ತೆ ನಿರ್ಮಿಸಿದರೆ ಆ ರಸ್ತೆಯು ಆತನ ಜೀವನದ ದಾರಿಯನ್ನು ತೋರಿಸುತ್ತದೆ. ಪ್ರತಿಫಲಾಕ್ಷೆ ಇಲ್ಲದೆ ಮಾಡುವ ಸೇವೆ ಎಳೆಯ ಹರೆಯದಲ್ಲಿ ಹುಟ್ಟಿಕೊಳ್ಳಬೇಕು ಎಂದು ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು ಹೇಳಿದರು.
ಅವರು ಮೂಲ್ಕಿ ಬಳಿಯ ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಉಮಾಹೇಶ್ವರೀ ದೇವಸ್ಥಾನದಲ್ಲಿ ಸೋಮವಾರ ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದ ಭಾಷಣದಲ್ಲಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಚ್.ವಸಂತ ಬೇರ್ನಾರ್ಡ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಿಬಿರಾಧಿಕಾರಿ ಪ್ರೇಮನಾಥ್ ಶೆಟ್ಟಿಗಾರ್‌ರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪ್ರಾಂಶುಪಾಲೆ ಗಿರಿಜವ್ವ ಮೆಣಸಿನಕಾಯಿ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆಪದ್ಮಾವತಿ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಯೋಗ ಶಿಕ್ಷಕ ಜಯ ದೇವಾಡಿಗ, ಶಿಬಿರದ ಮಾರ್ಗದರ್ಶಕರಾದ ದಿನೇಶ್ ಪೂಜಾರಿ, ರಮೇಶ್ ಸುವರ್ಣ, ಉಪನ್ಯಾಸಕ ಜಯಾನಂದ ಎನ್.ಸುವರ್ಣ ಉಪಸ್ಥಿತರಿದ್ದರು.
ಉಪನ್ಯಾಸಕ ಅನಿಲ್ ಚೆರಿಯನ್ ಸ್ವಾಗತಿಸಿದರು, ಶಿಬಿರಾಧಿಕಾರಿ ಪ್ರೇಮನಾಥ್ ಶೆಟ್ಟಿಗಾರ್ ವಂದಿಸಿದರು, ಉಪನ್ಯಾಸಕಿ ಜ್ಯೋತಿ ಚೆಳ್ಯಾಯರು ನಿರೂಪಿಸಿದರು.

Narendram Kerekadu

Mulki-21101501

Comments

comments

Comments are closed.

Read previous post:
Mukka-20101501
ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

ಮುಕ್ಕ: ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ದೈನಂದಿನ ಚಟುವಟಿಕೆಯಲ್ಲಿ ಪ್ರಾಮುಖ್ಯವಾಗಿದೆ. ಸೋಲು - ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ಮನೋಭಾವವನ್ನು ಕ್ರೀಡೆಯು ನೀಡುತ್ತದೆ. ಹಾಗೂ ನಿರಂತರ ಅಭ್ಯಾಸದಿಂದ...

Close