ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ

ಕಿನ್ನಿಗೋಳಿ: ಹಿಂದುತ್ವದ ಸಂಘಟನೆ ಬೆಳೆಸಿ ರಾಷ್ಟ್ರಕಾರ್ಯ ಹಾಗೂ ಸಮಾಜಪಯೋಗಿ ಕೆಲಸ ಕಾರ್ಯಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದಂದಿನಿಂದ ಮಾಡುತ್ತಿದ್ದು ಸ್ವಾಭಿಮಾನದ ಬದುಕು ನಮ್ಮದಾಗಬೇಕು ಎಂದು ಮಂಗಳೂರು ವಿಭಾಗ ಕಾರ್ಯವಾಹ ಪ್ರಕಾಶ್ ಪಿ. ಎಸ್. ಹೇಳಿದರು.
ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ್ಕಿ ತಾಲೂಕು ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪದಲ್ಲಿ ಮತನಾಡಿದರು.
ಸಮಾರಂಭದ ಮೊದಲು 181 ಸ್ವಯಂಸೇವಕರು ಮಲ್ಲಿಗೆ ಅಂಗಡಿಯಿಂದ ಕಟೀಲುವರೆಗೆ ಪಥ ಸಂಚಲನ ನಡೆಸಿದರು.
ಈ ಸಂದರ್ಭ ಶಿಕ್ಷಕ ಡಾ. ಅನಿತ್ ಕುಮಾರ್, ವರ್ಗ ಶಿಬಿರಾಧಿಕಾರಿ ಜಯರಾಮ ಡಿ. ಶೆಟ್ಟಿ ಕಟೀಲು ಉಪಸ್ಥಿತರಿದ್ದರು. ಸ್ವಯಂಸೇವಕರಿಂದ ಆಕರ್ಷಕ ಕವಾಯತು, ಯೋಗ ಪ್ರದರ್ಶನಗಳು ನಡೆದವು.

Kinnigoli-24101502

Comments

comments

Comments are closed.

Read previous post:
Kinnigoli-24101501
ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಕೊಲ್ಲೂರು-ಕವತ್ತಾರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಕೊಲ್ಲೂರು ಸ.ಹಿ.ಪ್ರಾ.ಶಾಲೆಯಲ್ಲಿ ಸಾಮೂಹಿಕ ಶ್ರೀ...

Close