ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಕೊಲ್ಲೂರು-ಕವತ್ತಾರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಕೊಲ್ಲೂರು ಸ.ಹಿ.ಪ್ರಾ.ಶಾಲೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಧಾರ್ಮಿಕ ಸಭೆಯಲ್ಲಿ ಸೋಂದಾ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಕರುಣಾಕರ ಶೆಟ್ಟಿ, ಶಿಕ್ಷಕಿ ಚಿತ್ರಾಕ್ಷಿ, ಪೂಜಾ ಅರ್ಚಕ ಶ್ರೀಧರ ಭಟ್, ಬಳ್ಕುಂಜೆ-ಕರ್ನಿರೆ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಮಮತಾ ಡಿ.ಪೂಂಜಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು.
ಕೊಲ್ಲೂರು ಒಕ್ಕೂಟದ ಅಧ್ಯಕ್ಷ ಉದಯ ನಾಯ್ಕ ಸ್ವಾಗತಿಸಿ, ಮಾಜಿ ಅಧ್ಯಕ್ಷ ಎಲ್ಲಪ್ಪ ಸಾಲ್ಯಾನ್ ವಂದಿಸಿದರು. ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-24101501

Comments

comments

Comments are closed.

Read previous post:
Mulki-21101505
ಮಂಗಳೂರು ಡಯಾಸೀಸ್ ಮಟ್ಟದ ಕ್ರೀಡಾಕೂಟ

ಮೂಲ್ಕಿ: ಕ್ರೀಡಾ ಕೂಟಗಳು ಯುವ ಸಮಾಜಕ್ಕೆ ಆರೋಗ್ಯ ನೀಡುವ ಜೊತೆಗೆ ಪರಸ್ಪರ ಸಂಘಟಿತರಾಗಿ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದು ಆದಾನಿ ಪವರ್ಸ್ ಪ್ರೋಜೆಕ್ಟ್ ಕೋರ್ಪರೇಟ್...

Close